ಮ್ಯಾಕ್ ಕಂಪ್ಯೂಟರ್ಸ್ ಹಾಗೂ ಐಪ್ಯಾಡ್ ಟ್ಯಾಬ್ಲೆಟ್‌ಗಳ ಮಾರಾಟದಲ್ಲಿ ನಿರೀಕ್ಷೆ ಮೀರಿ ಮಾರಾಟವಾಗಿದ್ದರಿಂದ ಆಪಲ್ ಕಂಪೆನಿ, ಮೊದಲ ತ್ರೈಮಾಸಿಕ ಅವಧಿಯ ನಿವ್ವಳ ಲಾಭದಲ್ಲಿ ಶೇ.78ರಷ್ಟು ಏರಿಕೆ ಕಂಡಿದೆ.
ಮೊದಲ ತ್ರೈಮಾಸಿಕ ಅವಧಿಯ ನಿವ್ವಳ ಲಾಭದಲ್ಲಿ ಶೇ.78ರಷ್ಟು ಏರಿಕೆಯಾಗಿ 3.25 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ. ಕಳೆದ ವರ್ಷದ ಅವಧಿಯಲ್ಲಿ 1.8 ಬಿಲಿಯನ್ ಡಾಲರ್‌ಗಳಿಗೆ ತಲುಪಿತ್ತು.
ಕಂಪೆನಿಯ ನಿವ್ವಳ ಆದಾಯದಲ್ಲಿ ಏಪ್ರಿಲ್-ಜೂನ್ ತಿಂಗಳ ಅವಧಿಯಲ್ಲಿ ಶೇ.61ರಷ್ಟು ಏರಿಕೆಯಾಗಿ 15.7 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಪಲ್ ಕಂಪೆನಿ, 8.4 ಮಿಲಿಯನ್ ಆಫೋನ್‌ಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷದ ಅವಧಿಗೆ ಹೋಲಿಸಿದಲ್ಲಿ ಶೇ.61ರಷ್ಟು ಏರಿಕೆಯಾಗಿದೆ. ಕಳೆದ ಜೂನ್ ತಿಂಗಳ ಅವಧಿಯಲ್ಲಿ ಐಫೋನ್4 ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ತ್ರೈಮಾಸಿಕ ಅವಧಿಯ ಕೊನೆಯ ಮೂರು ದಿನಗಳ ಅವಧಿಯಲ್ಲಿ 1.7 ಮಿಲಿಯನ್ ಐಫೋನ್‌ಗಳನ್ನು ಮಾರಾಟ ಮಾಡಲಾಗಿದೆ. ಮೂರು ತಿಂಗಳ ಅವಧಿಯಲ್ಲಿ 3.3 ಮಿಲಿಯನ್ ಐಪ್ಯಾಡ್‌ಗಳನ್ನು ಮಾರಾಟ ಮಾಡಲಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.