ಪೆಪ್ಸಿಕೊ ಕಂಪೆನಿ ನಿವ್ವಳ ಆದಾಯದಲ್ಲಿ ಶೇ.14ರಷ್ಟು ಹೆಚ್ಚಳ
ನ್ಯೂಯಾರ್ಕ್, ಬುಧವಾರ, 21 ಜುಲೈ 2010( 13:06 IST )
ಏಷ್ಯಾ ಮತ್ತು ಆಫ್ರಿಕನ್ ರಾಷ್ಟ್ರಗಳಿಂದ ಬೇಡಿಕೆಯಲ್ಲಿ ಹೆಚ್ಚಳವಾಗಿದ್ದರಿಂದ, ಅಮೆರಿಕ ಮೂಲದ ಪೆಪ್ಸಿಕೊ ಕಂಪೆನಿ, ಮೊದಲ ತ್ರೈಮಾಸಿಕ ಅವಧಿಯ ನಿವ್ವಳ ಆದಾಯದಲ್ಲಿ ಶೇ.40ರಷ್ಟು ಏರಿಕೆ ಕಂಡು 14.8 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ.
ಕಳೆದ ವರ್ಷದ ಅವಧಿಯಲ್ಲಿ ಪೆಪ್ಸಿಕೊ ಕಂಪೆನಿಯ ನಿವ್ವಳ ಆದಾಯ 10.6 ಬಿಲಿಯನ್ ಡಾಲರ್‌ಗಳಿಗೆ ತಲುಪಿತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬೇಡಿಕೆಗಳಲ್ಲಿ ಹೆಚ್ಚಳವಾಗಿದ್ದರಿಂದ, ನಿವ್ವಳ ಆದಾಯದಲ್ಲಿ ಏರಿಕೆಯಾಗಿದೆ ಎಂದು ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ.
ಮೊದಲ ತ್ರೈಮಾಸಿಕ ಅವಧಿಯಲ್ಲಿ, ಕಂಪೆನಿ, ಭಾರತ ಮತ್ತು ಚೀನಾ ಮಾರುಕಟ್ಟೆಗಳ ವಹಿವಾಟಿನಲ್ಲಿ ಎರಡಂಕಿ ಚೇತರಿಕೆಯನ್ನು ಕಂಡಿದೆ.
ಕಂಪೆನಿಯ ಕಾರ್ಯವಾಹಕ ಲಾಭದಲ್ಲಿ ಶೇ.14ರಷ್ಟು ಏರಿಕೆಯಾಗಿ 2.5 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ. ಕಳೆದ ವರ್ಷದ ಅವಧಿಯಲ್ಲಿ 2.2 ಬಿಲಿಯನ್ ಡಾಲರ್‌ಗಳಿಗೆ ತಲುಪಿತ್ತು.