ಸರಕು, ಸೇವಾ ಕ್ಷೇತ್ರಗಳಿಗೆ ಏಕೀಕೃತ ತೆರಿಗೆ ಪದ್ದತಿ:ಪ್ರಣಬ್
ನವದೆಹಲಿ, ಬುಧವಾರ, 21 ಜುಲೈ 2010( 17:10 IST )
ಮುಂಬರುವ ಏಪ್ರಿಲ್ ತಿಂಗಳಿನಿಂದ ಸರಕು ಸಾಗಾಣೆ ಮತ್ತು ಸೇವಾ ಕ್ಷೇತ್ರಗಳ ಮೇಲೆ ಶೇ.12-20ರಷ್ಟು ತೆರಿಗೆಯನ್ನು ಜಾರಿಗೊಳಿಸಲು ಸರಕಾರ ನಿರ್ಧರಿಸಿದೆ ಎಂದು ವಿತ್ತ ಖಾತೆ ಸಚಿವ ಪ್ರಣಬ್ ಮುಖರ್ಜಿ ಹೇಳಿದ್ದಾರೆ.
ಸರಕು ಸಾಗಾಣೆ ಮತ್ತು ಸೇವಾ ಕ್ಷೇತ್ರಗಳಲ್ಲಿ ಏಕೀಕೃತ ತೆರಿಗೆ ಕಾನೂನು ದೇಶಾದ್ಯಂತ ಏಕಕಾಲಕ್ಕೆ ಜಾರಿಗೆ ತರಲಾಗುತ್ತಿದೆ ಎಂದು ಪ್ರಣಬ್ ಹೇಳಿದ್ದಾರೆ.
ಕೇಂದ್ರ ಸರಕಾರ ಅಂತಾರಾಜ್ಯ ಸರಕು ಸಾಗಾಣೆ ಕ್ಷೇತ್ರದಲ್ಲಿ ಶೇ.10ರಷ್ಟು ಹಾಗೂ ಸೇವಾ ಕ್ಷೇತ್ರಗಳಲ್ಲಿ ಶೇ.8ರಷ್ಟು ತೆರಿಗೆಯನ್ನು ವಿಧಿಸಲು ಸರಕಾರ ಯೋಜನೆಗಳನ್ನು ಹಮ್ಮಿಕೊಂಡಿದೆ.ರಾಜ್ಯಗಳಲ್ಲಿ ಕೂಡಾ ಅದೇ ದರವನ್ನು ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ವಿವರಣೆ ನೀಡಿದ್ದಾರೆ.
ರಾಜ್ಯಗಳ ಹಾಗೂ ದೇಶದಲ್ಲಿ ತೆರಿಗೆ ಭಿನ್ನತೆಗಳನ್ನು ನಿವಾರಿಸಲು ಏಕೀಕೃತ ತೆರಿಗೆ ಪದ್ದತಿಯನ್ನು ಜಾರಿಗೊಳಿಸಲು ಸರಕಾರ ಸರಕು ಸಾಗಾಣೆ ಮತ್ತು ಸೇವಾ ಕ್ಷೇತ್ರಗಳಲ್ಲಿ ತೆರಿಗೆ ಪದ್ದತಿಯಲ್ಲಿ ಬದಲಾವಣೆಗಳನ್ನು ತರಲು ಉದ್ದೇಶಿಸಿದೆ ಎಂದು ಕೇಂದ್ರ ವಿತ್ತಖಾತೆ ಸಚಿವ ಪ್ರಣಬ್ ಮುಖರ್ಜಿ ತಿಳಿಸಿದ್ದಾರೆ.