ಟೋಯೋಟಾ ಕಾರುಗಳ ಮಾರಾಟ ಮುಂಬರುವ 2011ರಲ್ಲಿ ತ್ರಿಗುಣಗೊಳ್ಳುವ ಸಾಧ್ಯತೆಗಳಿವೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ.
ಟೋಯೋಟಾ ಕಿರ್ಲೋಸ್ಕರ್ ಮೋಟಾರ್, ಮುಂಬರುವ ವರ್ಷದಲ್ಲಿ 150,000 ಕಾರುಗಳನ್ನು ಮಾರಾಟ ಮಾಡುವ ನಿರೀಕ್ಷೆಯನ್ನು ಹೊಂದಿದೆ. ಪ್ರಸಕ್ತ ವರ್ಷಾಂತ್ಯಕ್ಕೆ ಕಾಂಪ್ಯಾಕ್ಟ್ ಎಟಿಯೊಸ್ ಮಾಡೆಲ್ ಕಾರು ಬಿಡುಗಡೆಯಾಗಲಿದ್ದು,ಗ್ರಾಹಕರನ್ನು ಆಕರ್ಷಿಸಲಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಒಂದು ವೇಳೆ 70,000 ಎಟಿಯೊಸ್ ಮಾಡೆಲ್ ಕಾರುಗಳನ್ನು ಉತ್ಪಾದಿಸಿದಲ್ಲಿ, 65,000 ದಿಂದ 67,000 ಕಾರುಗಳು ಮಾರಾಟವಾಗುತ್ತವೆ ಎಂದು ಉಪಪ್ಯವಸ್ಥಾಪಕ ನಿರ್ದೇಶಕ ಸಂದೀಪ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಬೆಂಗಳೂರ ನಗರಕ್ಕೆ ಹತ್ತಿರವಿರುವ ಘಟಕ ವಾರ್ಷಿಕವಾಗಿ 70,000 ಕಾರುಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿದ್ದು, ಕಾಂಪ್ಯಾಕ್ಟ್ ಕಾರು ಅದೇ ಘಟಕದಲ್ಲಿ ತಯಾರಿಸಲಾಗುವುದು ಎಂದು ಹೇಳಿದ್ದಾರೆ.
ಟೋಯೋಟಾ ಇಂಡಿಯಾದ ಮುಖ್ಯಸ್ಥ ಹಿರೋಷಿ ನಕಾಗವಾ ಮಾತನಾಡಿ, ಎಟಿಯೊಸ್‌ಗಿಂತ ಸಣ್ಣ ಕಾರ ತಯಾರಿಕೆಯನ್ನು ತಳ್ಳಿಹಾಕಿದ್ದಾರೆ.
ಕಳೆದ ತಿಂಗಳು, ಟೋಯೋಟಾ ಇಂಜಿನ್ ಮತ್ತು ಟ್ರಾನ್ಸಮಿಷನ್ ಸಿಸ್ಟಮ್ಸ್ ಉತ್ಪಾದನೆಗಾಗಿ 103 ಮಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ಹೇಳಿಕೆ ನೀಡಿತ್ತು.