ಗೃಹೋಪಕರಣ ತಯಾರಿಕೆ ಸಂಸ್ಥೆಯಾದ ಸೋನಿ ಇಂಡಿಯಾ, ಅಗಸ್ಟ್ ತಿಂಗಳು ಕೇರಳದಲ್ಲಿ ನಡೆಯಲಿರುವ ಓಣಂ ಹಬ್ಬದ ಸಂದರ್ಭದಲ್ಲಿ 100 ಕೋಟಿ ರೂಪಾಯಿ ವಹಿವಾಟು ನಡೆಸುವ ನಿರೀಕ್ಷೆಯನ್ನು ಹೊಂದಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಕೇರಳದ ಗೃಹೋಪಕರಣ ವಸ್ತುಗಳ ಮಾರಾಟದಲ್ಲಿ ಅಗ್ರಸ್ಥಾನವನ್ನು ಪಡೆಯುವ ಗುರಿಯನ್ನು ಹೊಂದಿದ್ದು, ಶೇ.45ರಷ್ಟು ವಹಿವಾಟಿನಲ್ಲಿ ಹೆಚ್ಚಳದ ಗುರಿಯನ್ನು ನಿರೀಕ್ಷಿಸಿದೆ ಎಂದು ಕಂಪೆನಿಯ ಹಿರಿಯ ವ್ಯವಸ್ಥಾಪಕ ನಿರ್ದೇಶಕ ಸುನೀಲ್ ನಯ್ಯರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕಂಪೆನಿ, ಬ್ರಾವಿಯಾ ಎಲ್‌ಸಿಡಿ ಟೆಲಿವಿಜನ್, ಸೈಬರ್ ಶಾಟ್ ಕ್ಯಾಮರಾ ಮತ್ತು ಹೋಂ ಥಿಯೇಟರ್ ಸಿಸ್ಟಮ್ ವಸ್ತುಗಳ ಮಾರಾಟದತ್ತ ಹೆಚ್ಚಿನ ಗಮನಹರಿಸಿದೆ ಎಂದು ಮೂಲಗಳು ತಿಳಿಸಿವೆ.
ಸೋನಿ ಸಂಸ್ಥೆ, ಓಣಂ ಹಬ್ಬದ ಸಂದರ್ಭದಲ್ಲಿ ಗ್ರಾಹಕರನ್ನು ಆಕರ್ಷಿಸಲು, ಜಾಹೀರಾತುಗಳಿಗಾಗಿ 5.5 ಕೋಟಿ ರೂಪಾಯಿ ವೆಚ್ಚ ಮಾಡಲಿದೆ ಎಂದು ಹಿರಿಯ ಉಪಾಧ್ಯಕ್ಷ ಸುನೀಲ್ ನಯ್ಯರ್ ತಿಳಿಸಿದ್ದಾರೆ.