ಭಾರ್ತಿ ಎಂಟರ್‌ಪ್ರೈಸೆಸ್ ಮತ್ತು ವಾಲ್-ಮಾರ್ಟ್ ಸ್ಟೋರ್ಸ್ ಜಂಟಿ ಸಹಭಾಗಿತ್ವದ ಭಾರ್ತಿ-ವಾಲ್‌ಮಾರ್ಟ್,ವರ್ಷಾಂತ್ಯಕ್ಕೆ ವಹಿವಾಟು ವಿಸ್ತರಣೆಗಾಗಿ 1,100 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಕಂಪೆನಿಗೆ ಹೆಚ್ಚುವರಿ ಸಿಬ್ಬಂದಿ ಅವಶ್ಯಕತೆಯಿರುವುದರಿಂದ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಿದೆ ಎಂದು ಭಾರ್ತಿ-ವಾಲ್‌ಮಾರ್ಟ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಜ್ ಜೈನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಮತ್ತಷ್ಟು ಸಿಬ್ಬಂದಿಗಳನ್ನು ನೇಮಕ ಮಾಡುವ ಕುರಿತಂತೆ ಅಡಳಿತ ಮಂಡಳಿ ಚರ್ಚೆ ನಡೆಸುತ್ತಿದೆ. ಉದ್ಯೋಗಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗುವ ಸಾಧ್ಯತೆಗಳಿವೆ ಜೈನ್ ಹೇಳಿದ್ದಾರೆ.
ಭಾರ್ತಿ ರಿಟೇಲ್, ಪ್ರಸ್ತುತವಿರುವ 80 ಮಳಿಗೆಗಳಿಂದ 140 ಮಳಿಗೆಗಳಿಗೆ ಹೆಚ್ಚಿಸಲು ನಿರ್ಧರಿಸಿದ್ದು,ರಿಟೋಲ್ ಔಟ್‌ಲೆಟ್‌ಗಳನ್ನು ವಿಸ್ತರಿಸಲಿದೆ ಎಂದು ಹೇಳಿದ್ದಾರೆ.
ಭಾರ್ತಿ ಎಂಟರ್‌ಪ್ರೈಸೆಸ್ ಮತ್ತು ಅಮೆರಿಕ ಮೂಲದ ವಾಲ್-ಮಾರ್ಟ್ ಸ್ಟೋರ್ಸ್ ಜಂಟಿಸಹಭಾಗಿತ್ವದಲ್ಲಿ ಅಗಸ್ಟ್ 2007ರಲ್ಲಿ ಕಾರ್ಯಾರಂಭ ಮಾಡಿದೆ.