ಭಾರತದಲ್ಲಿ ಸಾಮಾಜಿಕ ನೆಟ್‌ವರ್ಕ್ ತಾಣವಾದ 'ಫೇಸ್‌ಬುಕ್' ಬಳಕೆದಾರರ ಸಂಖ್ಯೆ 12 ಮಿಲಿಯನ್‌ಗಳಿಗೆ ತಲುಪಿದೆ ಎಂದು ಮೂಲಗಳು ತಿಳಿಸಿವೆ.
ಫೇಸ್‌ಬುಕ್ ಬಳಕೆದಾರರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವುದನ್ನು ಮುಂದುವರಿಸಿದ್ದರಿಂದ, ಬಳಕೆದಾರರ ಸಂಖ್ಯೆ 12 ಮಿಲಿಯನ್ ಗಡಿಯನ್ನು ದಾಟಿದೆ ಎಂದು ಫೇಸ್‌ಬುಕ್ ಅಡಳಿತ ಮಂಡಳಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಏತನ್ಮಧ್ಯೆ, ಭಾರತದಲ್ಲಿರುವ ಬಳಕೆದಾರರು ಪ್ರತಿ ತಿಂಗಳಿಗೆ 53 ಮಿಲಿಯನ್ ಫೋಟೋಗಳನ್ನು ಅಪ್‌ಲೋಡ್ ಮಾಡುತ್ತಿದ್ದು, ಮೊಬೈಲ್ ಬಳಕೆಯಲ್ಲಿ ಒಂಬತ್ತು ಪಟ್ಟು ಹೆಚ್ಚಳವಾಗಿದೆ ಎಂದು ವರದಿಯಲ್ಲಿ ಬಹಿರಂಗಪಡಿಸಿದೆ.
ಫೇಸ್‌ಬುಕ್ ವಿಶ್ವದಾದ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಭಾರತ ಮತ್ತು ಬ್ರೆಜಿಲ್‌ನಲ್ಲಿ ಗೂಗಲ್ ಸೃಷ್ಟಿಯಾದ ದೀರ್ಘಾವಧಿಯಿಂದ ಮುಂಚೂಣಿಯಲ್ಲಿರುವ ಆರ್ಕುಟ್‌ಗೆ ಸೆಡ್ಡುಹೊಡೆದಿದೆ ಎಂದು ಮೂಲಗಳು ತಿಳಿಸಿವೆ.
ವಿಶ್ವದಾದ್ಯಂತ,ಸುಮಾರು 500 ಮಿಲಿಯನ್ ಗ್ರಾಹಕರು ಪ್ರತಿನಿತ್ಯ ಫೇಸ್‌ಬುಕ್ ಬಳಸುತ್ತಾರೆ. ಕಳೆದ ತಿಂಗಳು ಭಾರತದ ಕಾರ್ಯಾಚರಣೆಗಾಗಿ ಹೈದ್ರಾಬಾದ್‌ನಲ್ಲಿ ಕೇಂದ್ರ ಕಚೇರಿಯನ್ನು ಆರಂಭಿಸಲಾಗಿದೆ ಎಂದು ಫೇಸ್‌ಬುಕ್ ಅಧಿಕಾರಿಗಳು ತಿಳಿಸಿದ್ದಾರೆ.