ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಮೈಕ್ರೋಸಾಫ್ಟ್ ನಿವ್ವಳ ಲಾಭದಲ್ಲಿ ಶೇ.48ರಷ್ಟು ಏರಿಕೆ (Microsoft | Quarterly profit | Wall Street | Software company)
Bookmark and Share Feedback Print
 
ಮೈಕ್ರೋಸಾಫ್ಟ್‌ ಕಾರ್ಪೋರೇಶನ್ ಜೂನ್ 30ಕ್ಕೆ ಮೊದಲ ತ್ರೈಮಾಸಿಕ ಅಂತ್ಯಗೊಂಡಂತೆ ನಿವ್ವಳ ಲಾಭದಲ್ಲಿ ಶೇ.48 ರಷ್ಟು ಏರಿಕೆಯಾಗಿದ್ದು, ವಾಲ್‌ಸ್ಟ್ರೀಟ್ ಸಮೀಕ್ಷೆಯ ಗುರಿಯನ್ನು ಸುಲಭವಾಗಿ ತಲುಪಿದೆ.

ಆದರೆ ಜಾಗತಿಕ ತಂತ್ರಜ್ಞಾನದಲ್ಲಿ ಮಹತ್ವದ ಬದಲಾವಣೆಗಳ ಕೊರತೆಯಿಂದಾಗಿ ಶೇರುಪೇಟೆಯಲ್ಲಿ ಶೇರುದರಗಳಲ್ಲಿ ಏರಿಕೆಯಾಗಿಲ್ಲ

ವಿಶ್ವದ ಬೃಹತ್ ಸಾಫ್ಟ್‌ವೇರ್ ಕಂಪೆನಿಯಾದ ಮೈಕ್ರೋಸಾಫ್ಟ್, ಮೈಕ್ರೋಸಾಫ್ಟ್ ತಯಾರಿಕೆಯ ಸಾಫ್ಟ್‌ವೇರ್ ಹೊಂದಿರುವ ನೂತನ ಪರ್ಸನಲ್ ಕಂಪ್ಯೂಟರ್‌ಗಳನ್ನು ಖರೀದಿಸಲು ಗ್ರಾಹಕರು ಹೆಚ್ಚಿನ ಆಸಕ್ತಿಯನ್ನು ತೋರಿದ್ದಾರೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಮೈಕ್ರೋಸಾಫ್ಟ್‌, ನಾಲ್ಕನೇ ತ್ರೈಮಾಸಿಕ ವರದಿಯನ್ನು ಬಿಡುಗಡೆ ಮಾಡಿದ್ದು, 4.52 ಬಿಲಿಯನ್ ಡಾಲರ್‌ಗಳ ನಿವ್ವಳ ಲಾಭವನ್ನು ಪ್ರಕಟಿಸಿದೆ. ಕಳೆದ ವರ್ಷದ ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ ನಿವ್ವಳ ಲಾಭ 3.04 ಬಿಲಿಯನ್ ಡಾಲರ್‌ಗಳಾಗಿತ್ತು ಎಂದು ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಮೈಕ್ರೋಸಾಫ್ಟ್ ಉತ್ಪನ್ನಗಳ ಮಾರಾಟದಲ್ಲಿ ಶೇ.22ರಷ್ಟು ಏರಿಕೆಯಾಗಿ 16.04 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ.ವಿಂಡೋಸ್ 7 ಕಾರ್ಯಾಚರಣೆ ವ್ಯವಸ್ಥೆಗಾಗಿ 175 ಮಿಲಿಯನ್ ಪರವಾನಗಿಗಳನ್ನು ನೀಡಲಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಜಾಗತಿಕ ಮಟ್ಟದಲ್ಲಿ ಕಂಪ್ಯೂಟರ್‌ಗಳ ಬೇಡಿಕೆಯಲ್ಲಿ ಹೆಚ್ಚಳವಾಗಿದ್ದರಿಂದ, ಕಂಪ್ಯೂಟರ್‌ಗಳ ಮಾರಾಟದಲ್ಲಿ ಶೇ.22ರಷ್ಟು ಏರಿಕೆಯಾಗಿದೆ ಎಂದು ಮುಖ್ಯ ಆರ್ಥಿಕ ಅಧಿಕಾರಿ ಪೀಟರ್ ಕ್ಲೇನ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ