ಯುರೋಪ್ ಮಾರುಕಟ್ಟೆಗಳ ಮಾರುಕಟ್ಟೆಗಳ ದುರ್ಬಲ ವಹಿವಾಟಿನ ಹಿನ್ನೆಲೆಯಲ್ಲಿ, ಚಿನ್ನದ ಸಂಗ್ರಹಕಾರರು ಚಿನ್ನದ ಮಾರಾಟದಲ್ಲಿ ತೊಡಗಿದ್ದರಿಂದ ಚಿನ್ನದ ದರದಲ್ಲಿ ಕುಸಿತವಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಕೈಗಾರಿಕೋದ್ಯಮ ಕ್ಷೇತ್ರದಿಂದ ಬೇಡಿಕೆಯಲ್ಲಿ ಕುಸಿತವಾಗಿದ್ದರಿಂದ, ಬೆಳ್ಳಿಯ ದರದಲ್ಲಿ ಕೂಡಾ ಕುಸಿತವಾಗಿದೆ.
ಚಿನ್ನದ ದರ ಪ್ರತಿ 10ಗ್ರಾಂಗೆ 105 ರೂಪಾಯಿಗಳ ಇಳಿಕೆಯಾಗಿ, 18,270 ರೂಪಾಯಿಗಳಿಗೆ ತಲುಪಿದೆ. ನಿನ್ನೆಯ ವಹಿವಾಟಿನ ಮುಕ್ತಾಯಕ್ಕೆ ಚಿನ್ನದ ದರ ಪ್ರತಿ 10ಗ್ರಾಂಗೆ 18,375 ರೂಪಾಯಿಗಳಿಗೆ ತಲುಪಿತ್ತು.
ಬೆಳ್ಳಿಯ ದರ ಪ್ರತಿ ಕೆಜಿಗೆ 25 ರೂಪಾಯಿಗಳ ಇಳಿಕೆ ಕಂಡು 29,300 ರೂಪಾಯಿಗಳಿಗೆ ತಲುಪಿದೆ. ನಿನ್ನೆಯ ವಹಿವಾಟಿನ ಮುಕ್ತಾಯಕ್ಕೆ 29,325 ರೂಪಾಯಿಗಳಿಗೆ ತಲುಪಿತ್ತು.
ಸಾಗರೋತ್ತರ ಮಾರುಕಟ್ಟೆಗಳಲ್ಲಿ ಚಿನ್ನದ ದರ ಪ್ರತಿ ಔನ್ಸ್‌ಗೆ 4 ಡಾಲರ್‌ಗಳ ಏರಿಕೆ ಕಂಡು 1,187.90 ಡಾಲರ್‌ಗಳಿಗೆ ತಲುಪಿದೆ.ಬೆಳ್ಳಿಯ ದರದಲ್ಲಿ ಪ್ರತಿ ಔನ್ಸ್‌ಗೆ 17.75 ಡಾಲರ್‌ಗಳಿಗೆ ಇಳಿಕೆಯಾಗಿದೆ.