ವಿಶ್ವದ ಎರಡನೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಹಾಗೂ ವಿಶ್ವ ಆರ್ಥಿಕತೆಯಲ್ಲಿ ನಾಲ್ಕನೇ ಸ್ಥಾನಪಡೆದಿರುವ ಭಾರತದ ಪ್ರಧಾನಿ ಮನಮೋಹನ್ ಸಿಂಗ್, 22 ರಾಷ್ಟ್ರಗಳ ಮುಖ್ಯಸ್ಥರಲ್ಲಿಯೇ ಕಡಿಮೆ ವೇತನ ಪಡೆಯುತ್ತಿದ್ದಾರೆ ಎಂದು ದಿ ಎಕಾನಾಮಿಸ್ಟ್ ಪತ್ರಿಕೆ ವರದಿ ಮಾಡಿದೆ.
ಮ್ಯಾಗ್‌ಜಿನ್ ಪ್ರಕಾರ, ಪ್ರಧಾನಿ ಮನಮೋಹನ್ ಸಿಂಗ್, ಪ್ರತಿ ವ್ಯಕ್ತಿಗೆ ಅಗತ್ಯವಾದ ಜಿಡಿಪಿ ದರಕ್ಕಿಂತ ಐದು ಪಟ್ಟು ಕಡಿಮೆ ವೇತನ ಪಡೆಯುತ್ತಿದ್ದಾರೆ. ಅಂದರೆ, ವಾರ್ಷಿಕವಾಗಿ 4,106 ಡಾಲರ್ (ಸುಮಾರು 2ಲಕ್ಷ) ವೇತನ ಪಡೆಯುತ್ತಿದ್ದಾರೆ.
ಕೀನ್ಯಾ ಪ್ರಧಾನಮಂತ್ರಿ ರೈಲಾ ಒಡಿಂಗಾ, ಪ್ರತಿ ವ್ಯಕ್ತಿಯ ಜಿಡಿಪಿ ದರಕ್ಕಿಂತ 240 ಪಟ್ಟು ಹೆಚ್ಚಿನ ವೇತನ ಪಡೆಯುತ್ತಿದ್ದಾರೆ. ಒಡಿಂಗಾ ವಾರ್ಷಿಕವಾಗಿ 430,000 ಡಾಲರ್‌ಗಳ ವೇತನ ಪಡೆಯುತ್ತಿದ್ದಾರೆ.
ಸಿಂಗಾಪೂರ್ ಪ್ರಧಾನಮಂತ್ರಿ ಲಿ ಹೆಸೈನ್ ಲೂಂಗ್, ಪ್ರತಿ ವ್ಯಕ್ತಿಯ ಜಿಡಿಪಿ ದರಕ್ಕಿಂತ 40 ಪಟ್ಟು ಹೆಚ್ಚಿನ ವೇತನ ಪಡೆಯುತ್ತಿದ್ದಾರೆ.
ಮುಂಗಾರು ಅಧಿವೇಶನ ಸೋಮವಾರದಂದು ಆರಂಭವಾಗಲಿದ್ದು, ಸಂಸದರು ವೇತನ ಹಾಗೂ ಭತ್ಯೆಗಳನ್ನು ಹೆಚ್ಚಿಸುವಂತೆ ಸಂಸತ್ತಿನಲ್ಲಿ ಮಸೂದೆಯನ್ನು ಮಂಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಂಸದರು, ಪ್ರಸ್ತುತವಿರುವ ಮಾಸಿಕ 16,000 ವೇತನವನ್ನು 80,001 ರೂಪಾಯಿಗಳಿಗೆ ಏರಿಕೆ ಮಾಡುವಂತೆ ಸಮಿತಿಯ. ಶಿಫಾರಸ್ಸುಗಳನ್ನು ಸಂಸತ್ತಿನಲ್ಲಿ ಮಂಡಿಸಲು ಸಿದ್ಧತೆ ನಡೆಸಿದ್ದಾರೆ ಎಂದು ಅನಾಮಧೇಯ ಅಧಿಕಾರಿಗಳು ತಿಳಿಸಿದ್ದಾರೆ.
ಸಂಸತ್ತಿನ ಅಧಿವೇಶನದ ಅವಧಿಯಲ್ಲಿ ಸಂಸದರಿಗೆ ಇಲ್ಲಿಯವರೆಗೆ 1 ಸಾವಿರ ರೂಪಾಯಿ ನೀಡಲಾಗುತ್ತದೆ. ಆದರೆ, ಭತ್ಯೆಯನ್ನು ದ್ವಿಗುಣಗೊಳಿಸುವಂತೆ ಒತ್ತಾಯಿಸಲು ನಿರ್ಧರಿಸಿವೆ. ಭತ್ಯೆಯನ್ನು ಹೊರತುಪಡಿಸಿ, ಪ್ರತಿಷ್ಠಿತ ಪ್ರದೇಶಗಳಲ್ಲಿ ವಾಸಕ್ಕಾಗಿ ಮನೆ, ಕಾರುಗಳು ಮತ್ತು ಚಾಲಕರು, ಉಚಿತ ವಿಮಾನಯಾನ ಮತ್ತು ರೈಲು ಪ್ರಯಾಣ (ಕುಟುಂಬದ ಸದಸ್ಯರು ಸೇರಿದಂತೆ) ಮತ್ತು ಉಚಿತ ದೂರವಾಣಿ ಸೌಲಭ್ಯವನ್ನು ಅನುಭವಿಸುತ್ತಿದ್ದಾರೆ.
ಕೀನ್ಯಾದಲ್ಲಿ ಸಂಸದರು, ತಮ್ಮ ವೇತನವನ್ನು ವಾರ್ಷಿಕವಾಗಿ 175,000 ಡಾಲರ್‌ಗಳಿಗೆ ಹೆಚ್ಚಳಕ್ಕೆ ಸರಕಾರ ಅನುಮತಿ ನೀಡಿರುವುದನ್ನು ವಿರೋಧಿಸಿ, ದೇಶದ ಜನತೆ ಭಾರಿ ಪ್ರತಿಭಟನೆಗಳನ್ನು ಹಮ್ಮಿಕೊಂಡಿದ್ದಾರೆ.