ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಡಿಸೆಂಬರ್‌ನಲ್ಲಿ ಹಣದುಬ್ಬರ ಶೇ.6ಕ್ಕೆ ಇಳಿಕೆ: ಪ್ರಧಾನಿ (Monsoon | Inflation | Manmohan Singh | Prices)
Bookmark and Share Feedback Print
 
ಅಗತ್ಯ ವಸ್ತುಗಳ ಏರಿಕೆಯಿಂದಾಗಿ ವಿರೋಧ ಪಕ್ಷಗಳಿಂದ ತೀವ್ರ ತರಾಟೆಗೆ ಒಳಗಾದ ಕೇಂದ್ರ ಸರಕಾರ, ಉತ್ತಮ ಮುಂಗಾರು ಮಳೆಯಿಂದಾಗಿ ಹಣದುಬ್ಬರ ದರ ಮುಂಬರುವ ಡಿಸೆಂಬರ್ ವೇಳೆಗೆ ಶೇ.6ಕ್ಕೆ ಕುಸಿತವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ.

ಸಗಟು ದರಗಳ ಹಣದುಬ್ಬರ ಮುಂಬರುವ ಡಿಸೆಂಬರ್ ವೇಳೆಗೆ, ಶೇ.6ಕ್ಕೆ ಇಲಿಕೆಯಾಗುವ ನಿರೀಕ್ಷೆಗಳಿವೆ ಎಂದು ಕೇಂದ್ರ ಸಚಿವರು ಹಾಗೂ ಬಹುತೇಕ ರಾಜ್ಯಗಳ ಮುಖ್ಯಮಂತ್ರಿಗಳು ಉಪಸ್ಥಿತರಿದ್ದ ಸಭೆಯಲ್ಲಿ ಪ್ರಥಾನ ಮಂತ್ರಿ ಮನಮೋಹನ್ ಸಿಂಗ್ ಹೇಳಿದ್ದಾರೆ.

ಮುಂಗಾರು ಅಧಿವೇಶನ ಸಂಸತ್ತಿನಲ್ಲಿ ಆರಂಭವಾಗಲಿರುವುದರಿಂದ, ಸಂಸತ್ತಿನಲ್ಲಿ ದರ ಏರಿಕೆ ಕೋಲಾಹಲ ನಿರೀಕ್ಷೆಯ ಹಿನ್ನೆಲೆಯಲ್ಲಿ, ಪ್ರಧಾನಿಯವರ ಹೇಳಿಕೆ ಹೊರಬಿದ್ದಿದೆ.

ಅಗತ್ಯ ವಸ್ತುಗಳ ದರ ಏರಿಕೆ ನಿಯತ್ರಣಕ್ಕಾಗಿ, ಕೇಂದ್ರ ಸರಕಾರ ಸೂಕ್ತ ಕ್ರಮಗಳನ್ನುತೆಗೆದುಕೊಂಡಿದೆ.ಮುಂಗಾರು ಮಳೆ ಉತ್ತಮವಾಗುತ್ತಿರುವುದರಿಂದ, ಮುಂಬರುವ ದಿನಗಳಲ್ಲಿ ಒಟ್ಟಾರೆ ಹಣದುಬ್ಬರ ದರ ಕುಸಿಯಲಿದೆ ಎಂದು ತಿಳಿಸಿದ್ದಾರೆ.

ದೇಶದ ಶೇ.80ರಷ್ಟು ಕೃಷಿ ಕ್ಷೇತ್ರ, ಮುಂಗಾರು ಮಳೆಯ ಮೇಲೆ ಅವಲಿಂಬಿತವಾಗಿದೆ.ಕಳೆದೆರೆಡು ವರ್ಷಗಳಿಂದ ಮುಂಗಾರು ಮಳೆಯ ವಿಫಲತೆಯಿಂದಾಗಿ, ಅಹಾರ ದರಗಳು ಸೇರಿದಂತೆ ಇತರ ದರಗಳಲ್ಲಿ ಕೂಡಾ ಏರಿಕೆಯಾಗಲಿದೆ.
ಸಂಬಂಧಿತ ಮಾಹಿತಿ ಹುಡುಕಿ