ಸಕ್ಕರೆ ದರದಲ್ಲಿ ಪ್ರತಿ ಕ್ವಿಂಟಾಲ್‌ಗೆ 180 ರೂಪಾಯಿ ಏರಿಕೆ
ನವದೆಹಲಿ, ಶನಿವಾರ, 24 ಜುಲೈ 2010( 13:15 IST )
ಸಕ್ಕರೆ ಕಾರ್ಖಾನೆಗಳ ಮಾಲೀಕರು ಸಕ್ಕರೆ ದರದಲ್ಲಿ ಏರಿಕೆ ಮಾಡಿದ್ದರಿಂದ, ಸಗಟು ಮಾರುಕಟ್ಟೆಗಳಲ್ಲಿ ಸಕ್ಕರೆ ದರ ಪ್ರತಿ ಕ್ವಿಂಟಾಲ್‌ಗೆ ಶೇ.6ರಷ್ಟು ಹೆಚ್ಚಳವಾಗಿ 180 ರೂಪಾಯಿಗಳಿಗೆ ತಲುಪಿದೆ.
ಹಬ್ಬದ ಸೀಜನ್ ಹಿನ್ನೆಲೆಯಲ್ಲಿ ಸಕ್ಕರೆ ದರ ಮತ್ತಷ್ಟು ಹೆಚ್ಚಳವಾಗಲಿದೆ ಎನ್ನುವ ನಿರೀಕ್ಷೆಯ ಹಿನ್ನೆಯಲ್ಲಿ, ಸಂಗ್ರಹಕಾರರು ಹಾಗೂ ವರ್ತಕರು ಭಾರಿ ಪ್ರಮಾಣದಲ್ಲಿ ಸಕ್ಕರೆ ಸಂಗ್ರಹದಲ್ಲಿ ತೊಡಗಿದ್ದರಿಂದ, ಸಕ್ಕರೆ ದರದಲ್ಲಿ ಏರಿಕೆಯಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಮುಂಬೈನ ವಾಶಿ ಸಗಟು ಮಾರುಕಟ್ಟೆಗಳಲ್ಲಿ, ಮಧ್ಯಮ ಗುಣಮಟ್ಟದ ಸಕ್ಕರೆ(ಎಂ-30) ಪ್ರತಿ ಕ್ವಿಂಟಾಲ್‌ಗೆ 150ರಿಂದ 180 ರೂಪಾಯಿಗಳಷ್ಟು ಏರಿಕೆಯಾಗಿ 2,850/2,950 ರೂಪಾಯಿಗಳಿಗೆ ತಲುಪಿದೆ.
ಏತನ್ಮದ್ಯೆ, ಸಣ್ಣ ಗಾತ್ರದ ಗುಣಮಟ್ಟದ ಸಕ್ಕರೆ (ಎಸ್-30) ಪ್ರತಿ ಕ್ವಿಂಟಾಲ್‌ಗೆ 120 ರಿಂದ 155 ರೂಪಾಯಿಗಳಷ್ಟು ಏರಿಕೆಯಾಗಿ 2,800/2,870 ರೂಪಾಯಿಗಳಿಗೆ ಏರಿಕೆಯಾಗಿದೆ.
ಮಹಾರಾಷ್ಟ್ರ ಮತ್ತು ಇತರ ರಾಜ್ಯಗಳಲ್ಲಿ ಸಕ್ಕರೆ ಕಾರ್ಖಾನೆಗಳ ಮಾಲೀಕರು, ಸಕ್ಕರೆ ದರದಲ್ಲಿ ಶೇ.4ರಿಂದ ಶೇ.6ರಷ್ಟು ಏರಿಕೆ ಮಾಡಿದ್ದರಿಂದ,ಸಕ್ಕರೆ ದರದಲ್ಲಿ ಏರಿಕೆಯಾಗಿದೆ ಎಂದು ವರ್ತಕ ಮೂಲಗಳು ತಿಳಿಸಿವೆ.