ದೇಶದ ಕಾರು ತಯಾರಿಕೆಯಲ್ಲಿ ಅಗ್ರಸ್ಥಾನದಲ್ಲಿರುವ ಮಾರುತಿ ಸುಝುಕಿ ಕಂಪೆನಿ, ಜೂನ್ 30ಕ್ಕೆ ತ್ರೈಮಾಸಿಕ ಅಂತ್ಯಗೊಂಡಂತೆ ಶೇ.20ರಷ್ಟು ನಿವ್ವಳ ಲಾಭದಲ್ಲಿ ಕುಸಿತ ಕಂಡಿದೆ.
2009-10ರ ಅವಧಿಯಲ್ಲಿ ಗರಿಷ್ಠ ಲಾಭ ದಾಖಲಿಸಿದ್ದ ಮಾರುತಿ ಕಂಪೆನಿ,ಕಳೆದ ಐದು ತ್ರೈಮಾಸಿಕ ಅವಧಿಯಲ್ಲಿ ಮೊದಲ ಬಾರಿಗೆ ನಿವ್ವಳ ಲಾಭದಲ್ಲಿ ಕುಸಿತ ಕಂಡಿದೆ.
ಕಳೆದ ಆರ್ಥಿಕ ವರ್ಷದ ಅವಧಿಯಲ್ಲಿ ಕಂಪೆನಿ 583.54 ಕೋಟಿ ರೂಪಾಯಿಗಳ ನಿವ್ವಳ ಲಾಭವನ್ನು ದಾಖಲಿಸಿತ್ತು ಎಂದು ಕಂಪೆನಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
2008-09ರ ಅವಧಿಯ ನಾಲ್ಕನೇ ತ್ರೈಮಾಸಿಕದ ನಿವ್ವಳ ಲಾಭದಲ್ಲಿ, ಶೇ.6.5ರಷ್ಟು ಇಳಿಕೆಯಾಗಿ, 465.85 ಕೋಟಿ ರೂಪಾಯಿಗಳಿಗೆ ತಲುಪಿತ್ತು.
ಮೊದಲ ತ್ರೈಮಾಸಿಕ ಅವಧಿಯಲ್ಲಿ, ಒಟ್ಟು ಆದಾಯದಲ್ಲಿ ಶೇ.26.78ರಷ್ಟು ಏರಿಕೆಯಾಗಿ 8,231.53 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ.ಕಳೆದ ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ ನಿವ್ವಳ ಆದಾಯ 6493 ಕೋಟಿ ರೂಪಾಯಿಗಳಾಗಿತ್ತು.