ಅನಿವಾಸಿ ಭಾರತೀಯ ಲಕ್ಷ್ಮಿ ಮಿತ್ತಲ್ ನೇತೃತ್ವದ ಅರ್ಸೆಲರ್- ಮಿತ್ತಲ್ ಉಕ್ಕು ತಯಾರಿಕಾ ಕಂಪೆನಿ ಬಳ್ಳಾರಿಯಲ್ಲಿ ಘಟಕ ಸ್ಥಾಪಿಸಲು ಜಮೀನು ಪಡೆಯಲು ಸರ್ಕಾರಕ್ಕೆ 600 ಕೋಟಿ ರೂಪಾಯಿಗಳನ್ನು ಪಾವತಿಸಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಬಳ್ಳಾರಿಯಲ್ಲಿ 30 ಸಾವಿರ ಕೋಟಿ ರೂಪಾಯಿ ಬಂಡವಾಳ ಹೂಡಿಕೆಯಲ್ಲಿ ಉಕ್ಕು ಘಟಕ ಆರಂಭಿಸಲು ಮಿತ್ತಲ್ ಸಂಸ್ಥೆ ಕಳೆದ ತಿಂಗಳು ರಾಜ್ಯ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿತ್ತು.
ಕಬ್ಬಿಣ ಅದಿರು ಹೇರಳವಾಗಿರುವ ಬಳ್ಳಾರಿಯಲ್ಲಿ ನಾಲ್ಕು ಸಾವಿರ ಎಕರೆ ಜಮೀನಿನಲ್ಲಿ ಘಟಕ ಆರಂಭಿಸಲು ಮಿತ್ತಲ್ ಸಂಸ್ಥೆ ಉದ್ದೇಶಿಸಿದೆ. ಪ್ರತಿ ವರ್ಷ 60 ಲಕ್ಷ ಟನ್ ಉಕ್ಕು ತಯಾರಿಸುವ ಗುರಿಯನ್ನು ಅದು ಹೊಂದಿದೆ.