ಹಣದುಬ್ಬರ ದರ ಏರಿಕೆ ಹಾಗೂ ಸಾಲ ಬೇಡಿಕೆಯಲ್ಲಿ ಕುಸಿತದಿಂದಾಗಿ, ಜುಲೈ 27 ರಂದು ನಡೆಯಲಿರುವ ಆರ್ಥಿಕ ಪರಿಷ್ಕರಣ ಸಭೆಯಲ್ಲಿ ಆರ್‌ಬಿಐ ರೆಪೋ ದರಗಳನ್ನು ಹೆಚ್ಚಿಸುವ ಸಾಧ್ಯತೆಗಳಿವೆ ಎಂದು ಬ್ಯಾಂಕಿಂಗ್ ಕ್ಷೇತ್ರದ ಅಧಿಕಾರಿಗಳು ಹೇಳಿದ್ದಾರೆ.
ಆರ್ಥಿಕ ಸಮೀಕ್ಷಾ ಸಂಸ್ಥೆಗಳಾದ ನೊಮುರಾ,ಎಡೆಲ್‌ವೈಸ್ ಆಂಡ್ ಕ್ರಿಸಿಲ್ ಮೂಲಗಳ ಪ್ರಕಾರ, ಆರ್‌ಬಿಐ ರೆಪೋ ಮತ್ತು ರಿವರ್ಸ್ ರೆಪೋ ದರಗಳಲ್ಲಿ 25 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಳಗೊಳಿಸುವ ಸಾಧ್ಯತೆಗಳಿವೆ.
ಜುಲೈ 27 ರಂದು ನಡೆಯಲಿರುವ ಆರ್ಥಿಕ ಪರಿಷ್ಕರಣ ಸಭೆಯಲ್ಲಿ, ಭಾರತೀಯ ರಿಸರ್ವ್ ಬ್ಯಾಂಕ್, ಮಾರುಕಟ್ಟೆಗಳಲ್ಲಿನ ನಗದು ಹರಿವನ್ನು ನಿಯಂತ್ರಿಸಲು ರೆಪೋ ದರಗಳನ್ನು ಏರಿಕೆ ಘೋಷಿಸುವ ಅಗತ್ಯವಿದೆ ಎಂದು ಆರ್‌ಬಿಐ ಮೂಲಗಳು ತಿಳಿಸಿವೆ.
ದೇಶದ ಬ್ಯಾಂಕ್‌ಗಳು ನಗದು ಹರಿವಿನ ಕೊರತೆಯನ್ನು ಎದುರಿಸುತ್ತಿರುವುದರಿಂದ, ಆರ್‌ಬಿಐಯಿಂದ 68,000 ಕೋಟಿ ರೂಪಾಯಿಗಳನ್ನು ಪಡೆಯಲಾಗಿದೆ. ಆದ್ದರಿಂದ ಆರ್‌ಬಿಐ ರೆಪೋ ದರಗಳನ್ನು ಏರಿಕೆ ಮಾಡುವ ಸಾಧ್ಯತೆಗಳಿಲ್ಲ ಎಂದು ಆರ್ಥಿಕ ತಜ್ಞ ಸೋನಾಲ್ ವರ್ಮಾ ತಿಳಿಸಿದ್ದಾರೆ.