ಹೆಚ್ಚುತ್ತಿರುವ ಅಹಾರ ಧಾನ್ಯಗಳ ದರಗಳು, ದೇಶದ ಜನತೆಯ ಪ್ರಮುಖ ಕಳವಳಕ್ಕೆ ಕಾರಣವಾಗಿವೆ ಎಂದು ಅಧ್ಯಯನ ಸಮೀಕ್ಷಾ ಸಂಸ್ಥೆಯೊಂದು ವರದಿಯಲ್ಲಿ ಬಹಿರಂಗಪಡಿಸಿದೆ.
ನೀಲ್ಸನ್ ಕಂಪೆನಿ ಸಮೀಕ್ಷೆ ನಡೆಸಿದ್ದು, ಉದ್ಯೋಗ ಮತ್ತು ಆರ್ಥಿಕತೆಗಿಂತ, ಅಗತ್ಯ ವಸ್ತುಗಳ ಅಹಾರ ದರಗಳಲ್ಲಿ ಏರಿಕೆಯಾಗುತ್ತಿರುವುದು ಜನತೆಯ ಕಳವಳಕ್ಕೆ ಪ್ರಮುಖ ಕಾರಣವಾಗಿದೆ ಎಂದು ವರದಿಯಲ್ಲಿ ತಿಳಿಸಿದೆ.
ಒಟ್ಟಾರೆ ಹಣದುಬ್ಬರ ದರ ಸರಾಸರಿ ಏಪ್ರಿಲ್ ತಿಂಗಳ ಅವಧಿಯಲ್ಲಿ ಶೇ.9.6ರಷ್ಟಾಗಿದೆ. ಕಳೆದ ವರ್ಷದ ಜುಲೈ ತಿಂಗಳ ಅವಧಿಯಲ್ಲಿ ಶೇ.1.3ರಷ್ಟಾಗಿತ್ತು ಎಂದು ತಿಳಿಸಿದೆ.
ಅಗತ್ಯ ವಸ್ತುಗಳ ಅಹಾರ ದರಗಳ ಏರಿಕೆ ಕಳವಳ ಮುಂಬರುವ ಆರು ತಿಂಗಳುಗಳವರೆಗೆ ಮುಂದುವರಿಯಲಿದೆ ಎಂದು ಅಧ್ಯಯನ ವರದಿಯಲ್ಲಿ ಬಹಿರಂಗಪಡಿಸಿದೆ.
ಕಳೆದ ಕೆಲ ವರ್ಷಗಳಿಂದ ಅಹಾರ ದರಗಳ ಏರಿಕೆಯಿಂದಾಗಿ ಜನತೆ ತತ್ತರಿಸಿದ್ದಾರೆ.ಅಹಾರ ವಸ್ತುಗಳು ಹಾಗೂ ಇಂಧನ ದರಗಳ ಏರಿಕೆಯಿಂದಾಗಿ ಅಹಾರ ಸೂಚ್ಯಂಕ ದರದಲ್ಲಿ ಏರಿಕೆಯಾಗಿದೆ.ಅಹಾರ ವಸ್ತುಗಳ ದರ ಏರಿಕೆಯನ್ನು ನಿಯಂತ್ರಿಸಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದು ಅಗತ್ಯವಾಗಿದೆ ಎಂದು ನೀಲ್ಸನ್ ಕಂಪೆನಿಯ ಭಾರತದ ಅಧ್ಯಕ್ಷ ಪಿಯೂಷ್ ಮಾಥುರ್ ತಿಳಿಸಿದ್ದಾರೆ.