ಭಾರತದ ಗಣಿಗಾರಿಕೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಶೇ.8ರಷ್ಟು ಕುಸಿತ ಕಾಣುವ ಸಾಧ್ಯತೆಗಳಿವೆ ಎಂದು ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಸಮಿತಿಯ ಮೂಲಗಳು ತಿಳಿಸಿವೆ.
ಗಣಿಗಾರಿಕೆಯಲ್ಲಿ ಪಾರದರ್ಶಕತೆಯನ್ನು ತರಲು, ಮೈನ್ಸ್ ಆಂಡ್ ಮಿನರಲ್ಸ್ ಡೆವೆಲೆಪ್‌ಮೆಂಟ್ ಆಂಡ್ ರೆಗ್ಯೂಲೇಶನ್ ಆಕ್ಟ್ 2010 ಕುರಿತಂತೆ, ಸಂವಿಧಾನದಲ್ಲಿ ತಿದ್ದುಪಡಿ ತರುವ ಚರ್ಚೆ ಸಂಸತ್ತಿನಲ್ಲಿ ನಡೆಯುವ ಸಾಧ್ಯತೆಗಳಿರುವುದರಿಂದ, ವಹಿವಾಟಿನಲ್ಲಿ ಕುಸಿತವಾಗುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಗಣಿಗಾರಿಕೆ ಕ್ಷೇತ್ರ 2009-10ರ ಅವಧಿಯಲ್ಲಿ ಶೇ.10ರಷ್ಟು ಚೇತರಿಕೆ ಕಂಡಿತ್ತು ಎಂದು ಎಕಾನಾಮಿಕ್ ಔಟ್‌ಲುಕ್ ಪತ್ರಿಕೆ ವರದಿ ಮಾಡಿದೆ.
ಏತನ್ಮಧ್ಯೆ, ದೇಶದ ಒಟ್ಟಾರೆ ಆರ್ಥಿಕತೆ 2010-11ರ ಅವಧಿಯಲ್ಲಿ, ಶೇ.8.5ಕ್ಕೆ ತಲುಪಲಿದೆ.ಮುಂದಿನ ವರ್ಷಾಂತ್ಯಕ್ಕೆ ಜಿಡಿಪಿ ದರ ಶೇ.9ಕ್ಕೆ ತಲಪುವ ಸಾಧ್ಯತೆಗಳಿವೆ ಎಂದು ಪ್ರಧಾನಮಂತ್ರಿಗಳ ಆರ್ಥಿಕ ಸಲಹಾ ಸಮಿತಿ ಅಧ್ಯಕ್ಷ ಸಿ.ರಂಗರಾಜನ್ ತಿಳಿಸಿದ್ದಾರೆ.