ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಸೇಲ್ : ಮಾಳವಿಕಾ ಘಟಕಕ್ಕೆ 100 ಕೋಟಿ ರೂ.ಹೂಡಿಕೆ (SAIL| Malvika Steel | Steelmaker | JSU)
Bookmark and Share Feedback Print
 
ಸರಕಾರಿ ಸ್ವಾಮ್ಯದ ಉಕ್ಕು ಉತ್ಪಾದಕ ಕಂಪೆನಿಯಾದ ಸೇಲ್, ಕಳೆದ ವರ್ಷ ಸ್ವಾಧೀನಪಡಿಸಕೊಳ್ಳಲಾದ ಉತ್ತರಪ್ರದೇಶದಲ್ಲಿರುವ ಘಟಕವನ್ನು ಮೇಲ್ದರ್ಜೇಗೇರಿಸಲು 100 ಕೋಟಿ ರೂಪಾಯಿ ಹೂಡಿಕೆ ಮಾಡುವುದಾಗಿ ಪ್ರಕಟಿಸಿದೆ.

ಉತ್ತರಪ್ರದೇಶದಲ್ಲಿರುವ ಘಟಕವನ್ನು ಮೇಲ್ದರ್ಜೇಗೇರಿಸಲು 100 ಕೋಟಿ ರೂಪಾಯಿ ಹೂಡಿಕೆ ಅಂದಾಜಿಸಲಾಗಿದೆ.ಉತ್ತರ ಪ್ರದೇಶದ ಜಗದೀಶ್‌ಪುರ್‌ನಲ್ಲಿರುವ ಘಟಕವನ್ನು ಕಳೆದ ವರ್ಷ ಸ್ವಾಧೀನಪಡಿಸಿಕೊಂಡ ಮಾಲ್ವಿಕಾ ಸ್ಟೀಲ್ ಕಂಪೆನಿಯನ್ನು ಕಳೆದ ವರ್ಷ 209 ಕೋಟಿ ರೂಪಾಯಿಗಳನ್ನು ಪಾವತಿಸಿ ಖರೀದಿಸಿತ್ತು.

ಮೂಲಸೌಕರ್ಯ ಕ್ಷೇತ್ರಗಳಿಗೆ ಹಾಗೂ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಅಗತ್ಯವಾದ ಉಕ್ಕು ವಸ್ತುಗಳನ್ನು ತಯಾರಿಸಲು 46 ಕೋಟಿ ರೂಪಾಯಿ ವೆಚ್ಚದಲ್ಲಿ ಮೇಲ್ದರ್ಜೇಗೇರಿಸಲಾಗುವುದು ಎಂದು ಕಂಪೆನಿಯ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

ಸೇಲ್ ಸಂಸ್ಥೆ ನಿಗದಿತ ಗುರಿಯನ್ನು ತಲುಪುವಲ್ಲಿ ಪ್ರತಿಯೊಬ್ಬರು ಬದ್ಧತೆ ಹಾಗೂ ಕಾರ್ಯಕ್ಷಮತೆಯನ್ನು ತೋರುವುದು ಅಗತ್ಯವಾಗಿದೆ ಎಂದು ಉಕ್ಕು ಸಚಿವಾಲಯದ ಕಾರ್ಯದರ್ಶಿ ಅತುಲ್ ಚತುರ್ವೇದಿ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ