ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಚಿನ್ನದ ದರದಲ್ಲಿ ಕುಸಿತ, ಬೆಳ್ಳಿ ದರ ಏರಿಕೆ (Gold prices | Silver | Bullion market | Festive season)
Bookmark and Share Feedback Print
 
PTI
ಸಾಗರೋತ್ತರ ಮಾರುಕಟ್ಟೆಗಳಲ್ಲಿ ಚಿನ್ನದ ಬೇಡಿಕೆ ಕುಸಿತವಾಗಿದ್ದರಿಂದ, ಚಿನ್ನದ ದರ ಪ್ರತಿ 10ಗ್ರಾಂಗೆ 5 ರೂಪಾಯಿಗಳಷ್ಟು ಇಳಿಕೆಯಾಗಿ 18,520 ರೂಪಾಯಿಗಳಿಗೆ ತಲುಪಿದೆ.

ಆದರೆ, ಹಬ್ಬದ ಸೀಜನ್ ಹಿನ್ನೆಲೆಯಲ್ಲಿ ಕೈಗಾರಿಕೆ ಘಟಕಗಳು ಹಾಗೂ ಚಿಲ್ಲರೆ ವಹಿವಾಟುದಾರರಿಂದ ಬೇಡಿಕೆಯಲ್ಲಿ ಹೆಚ್ಚಳವಾಗಿದ್ದರಿಂದ ಬೆಳ್ಳಿಯ ದರದಲ್ಲಿ ಪ್ರತಿ ಕೆಜಿಗೆ 50 ರೂಪಾಯಿಗಳಷ್ಟು ಏರಿಕೆಯಾಗಿ 29,450 ರೂಪಾಯಿಗಳಿಗೆ ತಲುಪಿದೆ.

ಚಿನ್ನದ ಪ್ರಸ್ತುತ ದರ ಏರಿಕೆಯಿಂದಾಗಿ, ಬೇಡಿಕೆ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ ಎಂದು ಮಾರುಕಟ್ಟೆಯ ವರ್ತಕರು ತಿಳಿಸಿದ್ದಾರೆ.

ಏತನ್ಮಧ್ಯೆ, ಹಬ್ಬದ ಸೀಜನ್ ಹಿನ್ನೆಲೆಯಲ್ಲಿ ಕೈಗಾರಿಕೋದ್ಯಮಗಳಿಂದ ಬೆಳ್ಳಿಯ ಬೇಡಿಕೆಯಲ್ಲಿ ಹೆಚ್ಚಳವಾಗಲು ಕಾರಣವಾಗಿದೆ ಎಂದು ಚಿನಿವಾರಪೇಟೆಯ ಮೂಲಗಳು ತಿಳಿಸಿವೆ.

ಅಪ್ಪಟ ಚಿನ್ನ ಶೇ.99.9ರಷ್ಟು ಹಾಗೂ ಶೇ.99.5ರಷ್ಟು ಪರಿಪೂರ್ಣ, ಪ್ರತಿ 10ಗ್ರಾಂಗೆ 5 ರೂಪಾಯಿಗಳ ಇಳಿಕೆ ಕಂಡು ಕ್ರಮವಾಗಿ 18,520 ಮತ್ತು 18,420 ರೂಪಾಯಿಗಳಿಗೆ ತಲುಪಿದೆ.
ಸಂಬಂಧಿತ ಮಾಹಿತಿ ಹುಡುಕಿ