ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಇಂದು ಆರ್ಬಿಐ ಆರ್ಥಿಕ ಪರಿಷ್ಕರಣೆ:ರೆಪೋ ದರ ಹೆಚ್ಚಳ? (RBI | HDFC | Punjab National Bank | Union Bank of India | Bank of India)
ಭಾರತೀಯ ರಿಸರ್ವ್ ಬ್ಯಾಂಕ್ ಮೊದಲ ತ್ರೈಮಾಸಿಕ ಅವಧಿಯ ಅಂಗವಾಗಿ, ಇಂದು ಆರ್ಥಿಕ ಪರಿಷ್ಕರಣ ಸಭೆ ನಡೆಸಲಿದ್ದು, ರೆಪೋ ದರಗಳಲ್ಲಿ 25 ಬೇಸಿಸ್ ಪಾಯಿಂಟ್ಗಳಷ್ಟು ಹೆಚ್ಚಿಸುವ ಸಾಧ್ಯತೆಗಳಿವೆ.
ಆರ್ಬಿಐ ರೆಪೋ ಮತ್ತು ರಿವರ್ಸ್ ರೆಪೋ ದರಗಳಲ್ಲಿ 25 ಬೇಸಿಸ್ ಪಾಯಿಂಟ್ಗಳಷ್ಟು ಅಲ್ಪ ಹೆಚ್ಚಳ ಮಾಡುವ ನಿರೀಕ್ಷೆಗಳಿವೆ ಎಂದು ಎಚ್ಡಿಎಫ್ಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ರೇಣು ಸೂದ್ ಕರ್ನಾಡ್ ತಿಳಿಸಿದ್ದಾರೆ.
ಹಣದುಬ್ಬರ ದರ ನಿರಂತರ ಏರಿಕೆಗೆ ಕಡಿವಾಣ ಹಾಕಲು ಆರ್ಬಿಐ,ಮಾರುಕಟ್ಟೆಗಳಲ್ಲಿನ ನಗದು ಹರಿವು ನಿಯಂತ್ರಿಸಲು ರೆಪೋ ಮತ್ತು ರಿವರ್ಸ್ ರೆಪೋ ದರಗಳನ್ನು ಹೆಚ್ಚಿಸಲು ನಿರ್ಧರಿಸಿದೆ ಎಂದು ಆರ್ಬಿಐ ಮೂಲಗಳು ತಿಳಿಸಿವೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಮುಖ್ಯಸ್ಥ ಕೆ.ಆರ್.ಕಾಮತ್ ಮಾತನಾಡಿ,ಭಾರತೀಯ ರಿಸರ್ವ್ ಬ್ಯಾಂಕ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬ್ಯಾಂಕ್ಗಳು ಬದ್ಧವಾಗಿದ್ದು, ಆರ್ಬಿಐ ನಿರ್ಧಾರಕ್ಕೆ ಸ್ಪಂದಿಸಲಿವೆ ಎಂದು ಹೇಳಿದ್ದಾರೆ.
ಕಳೆದ ತಿಂಗಳು ಆರ್ಬಿಐ, ಹಣದುಬ್ಬರ ಏರಿಕೆಗೆ ಕಡಿವಾಣ ಹಾಕಲು, ರೆಪೋ ಮತ್ತು ರಿವರ್ಸ್ ರೆಪೋ ದರಗಳಲ್ಲಿ 25 ಬೇಸಿಸ್ ಪಾಯಿಂಟ್ಗಳಷ್ಟು ಹೆಚ್ಚಿಸಿ ಆದೇಶ ಹೊರಡಿಸಿತ್ತು.
ಹಣದುಬ್ಬರ ದರ, ಅಗತ್ಯ ವಸ್ತುಗಳ ದರ ಏರಿಕೆಯಿಂದಾಗಿ ಪ್ರಸ್ತುತ ಎರಡಂಕಿಗೆ ತಲುಪಿದೆ. ಜೂನ್ ತಿಂಗಳ ಅವದಿಯಲ್ಲಿ ಹಣದುಬ್ಬರ ದರ ಶೇ.10.55ಕ್ಕೆ ತಲುಪಿತ್ತು.ಅಹಾರ ಹಣದುಬ್ಬರ ದರ ಜುಲೈ ತಿಂಗಳ ಅವಧಿಯಲ್ಲಿ ಶೇ.12.47ಕ್ಕೆ ತಲುಪಿದೆ.