ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಆರ್‌ಬಿಐನಿಂದ ರೆಪೋ, ರಿವರ್ಸ್ ರೆಪೋ ದರಗಳಲ್ಲಿ ಏರಿಕೆ (RBI, Repo , Reverse repo | Inflation | Central bank | Basis points)
Bookmark and Share Feedback Print
 
PTI
ಹಣದುಬ್ಬರ ದರ ಏರಿಕೆ ನಿಯಂತ್ರಣಕ್ಕಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಆರ್ಥಿಕ ಪರಿಷ್ಕರಣ ಸಭೆಯಲ್ಲಿ, ಕಡಿಮೆ ಅವಧಿಯ ಸಾಲದ ಮೇಲಿನ ರೆಪೋ ದರದಲ್ಲಿ 25 ಹಾಗೂ ರಿವರ್ಸ್ ರೆಪೋ ದರದಲ್ಲಿ 50 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿ ಆದೇಶ ಹೊರಡಿಸಿದೆ ಎಂದು ಆರ್‌ಬಿಐ ಮೂಲಗಳು ತಿಳಿಸಿವೆ.

ಭಾರತೀಯ ರಿಸರ್ವ್ ಬ್ಯಾಂಕ್,ರೆಪೋ ದರಗಳಲ್ಲಿ 25 ಬೇಸಿಸ್ ಪಾಯಿಂಟ್‌ಗಳನ್ನು ಹೆಚ್ಚಿಸಿದ್ದು ಶೇ.5.75ಕ್ಕೆ ತಲುಪಿದೆ. ರಿವರ್ಸ್ ರೆಪೋ ದರದಲ್ಲಿ ಕೂಡಾ 50ಬೇಸಿಸ್ ಪಾಯಿಂಟ್‌ಗಳನ್ನು ಹೆಚ್ಚಿಸಿದ್ದರಿಂದ ಶೇ. 4.50ಕ್ಕೆ ತಲುಪಿದೆ.

ಆದರೆ, ಸಿಆರ್‌ಆರ್ (ಕ್ಯಾಶ್ ರಿಸರ್ವ್ ರೇಶಿಯೋ) ದರದಲ್ಲಿ ಯಾವುದೇ ಬದಲಾವಣೆ ಮಾಡದಿರಲು ಆರ್‌ಬಿಐ ಅಧಿಕಾರಿಗಳು ನಿರ್ಧರಿಸಿದ್ದಾರೆ.

ಆರ್ಥಿಕ ನೀತಿಗಳಲ್ಲಿ ಕಠಿಣ ಬದಲಾವಣೆಗಳನ್ನು ತರುವುದರಿಂದ, ದೇಶದ ಆರ್ಥಿಕತೆ ಚೇತರಿಕೆಗೆ ಅಡ್ಡಿಯಾಗುವುದಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟಪಡಿಸಿದೆ.
PTI


ಹಣದುಬ್ಬರ ದರ ಮಾರ್ಚ್ ಅಂತ್ಯದ ವೇಳೆಗೆ ಶೇ.6ಕ್ಕೆ ತಲುಪುವ ನಿರೀಕ್ಷೆಗಳಿವೆ. ಹಣದುಬ್ಬರ ನಿಯಂತ್ರಣಕ್ಕಾಗಿ ಕೆಲ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಆರ್‌ಬಿಐ ಅಧಿಕಾರಿಗಳು ತಿಳಿಸಿದ್ದಾರೆ.

ದೇಶದ ಆರ್ಥಿಕ ವೃದ್ಧಿ ದರ, ಪ್ರಸಕ್ತ ಆರ್ಥಿಕ ವರ್ಷಾಂತ್ಯಕ್ಕೆ ಶೇ.8.5ಕ್ಕೆ ಇಳಿಕೆಯಾಗುವ ಸಾಧ್ಯತೆಗಳಿವೆ. ಕೆಲ ತಿಂಗಳುಗಳ ಹಿಂದೆ ಆರ್‌ಬಿಐ, ಹಣದುಬ್ಬರ ದರ ವರ್ಷಾಂತ್ಯಕ್ಕೆ ಶೇ.8ಕ್ಕೆ ತಲುಪಲಿದೆ ಎಂದು ವರದಿಯಲ್ಲಿ ಬಹಿರಂಗಪಡಿಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ