ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಪ್ರತಿ ಗಂಟೆಗೆ 1600 ಕೀ.ಮಿ.ವೇಗದಲ್ಲಿ ಸಾಗುವ ಕಾರು (British team | Pencil-shaped car | Travel | Supersonic Car | Briton Richard Noble)
ಪ್ರಸ್ತುತವಿರುವ ಕಾರಿನ ವೇಗದ ದಾಖಲೆಯನ್ನು ಮುರಿದು, ಹೊಸತೊಂದು ದಾಖಲೆಯನ್ನು ಸ್ಥಾಪಿಸಲು ಬ್ರಿಟನ್ ತಂಡಪೆನ್ಸಿಲ್ ಆಕಾರದ ಕಾರಿನ ವಿನ್ಯಾಸ ರೂಪಿಸಲಾಗಿದ್ದು, ಪ್ರತಿ ಗಂಟೆಗೆ 1,600 ಕೀ.ಮಿ.ದೂರವನ್ನು ಕ್ರಮಿಸಲಿದೆ.
ಸತತ ಮೂರು ವರ್ಷಗಳ ಏರೋಡೈನಮಿಕ್ ಸಂಶೋಧನೆಯ ನಂತರ, ಸೂಪರ್ ಸಾನಿಕ್ ಕಾರಿನ ವಿನ್ಯಾಸ ಅಂತಿಮ ಹಂತದಲ್ಲಿದ್ದು, ಕಾರಿಗೆ ಜೆಟ್ ಇಂಜಿನ್ ಮತ್ತು ರಾಕೆಟ್ ಅಳವಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕಾರಿನ ವಿನ್ಯಾಸದ ಆಕಾರವನ್ನು ಅಂತಿಮಗೊಳಿಸಲಾಗಿದೆ ಎಂದು ರಾಯಲ್ ಏರ್‌ಫೋರ್ಸ್ ಯುದ್ಧ ವಿಮಾನದ ಪೈಲಟ್ ಆಂಡಿ ಗ್ರೀನ್ ಹೇಳಿದ್ದಾರೆ.
ಕಾರಿಗೆ ಪೆನ್ಸಿಲ್ ಆಕಾರವನ್ನು ರೂಪಿಸಿದ್ದರಿಂದ, ಇಂತಹ ಆಕಾರದಿಂದಾಗಿ ಪ್ರತಿ ಗಂಟೆಗೆ 1,600 ಕೀ.ಮಿ.ದೂರವನ್ನು ಕ್ರಮಿಸಲಿದೆ.ಇದೀಗ, ಗರಿಷ್ಠ ದೂರವನ್ನು ಕ್ರಮಿಸುವಕಾರು ತಯಾರಿಕೆ ಅಂತಿಮ ಹಂತದಲ್ಲಿದೆ ಎಂದು ತಿಳಿಸಿದ್ದಾರೆ.
ಬ್ರಿಟನ್ ರಿಚರ್ಡ್ ನೊಬೆಲ್ ನೇತೃತ್ವದ ಇದೇ ತಂಡ, 1997ರಲ್ಲಿ ಪ್ರತಿ ಗಂಟೆಗೆ 763 ಕೀ.ಮಿ.ದೂರವನ್ನು ಕ್ರಮಿಸುವ ಕಾರಿನ ವಿನ್ಯಾಸ ರೂಪಿಸಿರುವ ಖ್ಯಾತಿಯನ್ನು ಹೊಂದಿದೆ. 1997ರಲ್ಲಿ ಆಂಡಿ ಗ್ರೀನ್ ಸೂಪರ್ ಸಾನಿಕ್ ಕಾರು ಚಾಲನೆ ಮಾಡಿ ದಾಖಲೆಯನ್ನು ಸ್ಥಾಪಿಸಿದವರಲ್ಲಿ ಮೊದಲಿಗರಾಗಿದ್ದಾರೆ.
ಟೈಫೂನ್ ಜೆಟ್ ಇಂಜಿನ್ ಮತ್ತು ಫಾಲ್ಕೊನ್ ರಾಕೆಟ್‌ನ ಸಂಯೋಗವಾಗಿರುವ ಕಾರನ್ನು ಮೊದಲ ಬಾರಿಗೆ ಫಾರ್ನಬೊರಫ್ ಇಂಟರ್‌ನ್ಯಾಷನಲ್ ಏರ್‌ಶೋನಲ್ಲಿ ಬಿಡುಗಡೆಗೊಳಿಸಲಾಗಿತ್ತು.ಕಾರು 135,000 ಹಾರ್ಸ್‌ಪವರ್ ಅಥವಾ ಫಾರ್ಮುಲಾ ಒನ್ ಕಾರಿಗಿಂತ 180 ಪಟ್ಟು ಹೆಚ್ಚಿನ ಇಂಜಿನ್ ಸಾಮರ್ಥ್ಯವನ್ನು ಹೊಂದಿದೆ.
ಕಾರು 45 ಸೆಕೆಂಡ್‌ಗಳ ಅವದಿಯಲ್ಲಿ 7.25 ಕೀ.ಮಿ.ದೂರವನ್ನು ಕ್ರಮಿಸಿದ ನಂತರ, ಗರಿಷ್ಠ ಪ್ರತಿ ಗಂಟೆಗೆ 1,609 ಕೀ.ಮಿ ವೇಗವನ್ನು ಪಡೆಯಲಿದೆ ಎಂದು ವಿನ್ಯಾಸಗಾರರು ತಿಳಿಸಿದ್ದಾರೆ.
ವೇಗದ ಕಾರಿನ ವಿನ್ಯಾಸ ಕೇವಲ ದಾಖಲೆಗಳನ್ನು ಮುರಿಯಲು ರೂಪಿಸುತ್ತಿಲ್ಲ. ಮುಂಬರುವ ಪೀಳಿಗೆ , ಇಂಜಿನಿಯರ್‌ಗಳಿಗೆ ಮತ್ತು ತಂತ್ರಜ್ಞರಿಗೆ ಸ್ಪೂರ್ತಿಯನ್ನು ನೀಡಲು ವೇಗದ ಕಾರು ಸಿದ್ಧಪಡಿಸಲಾಗುತ್ತಿದೆ ಎಂದು ಕಾರು ತಯಾರಕರು ಸ್ಪಷ್ಟಪಡಿಸಿದ್ದಾರೆ.