ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ರೆಪೋ ದರ ಹೆಚ್ಚಳ : ವಾಹನ,ಗೃಹ ಸಾಲ ತುಟ್ಟಿ ಸಾಧ್ಯತೆ (RBI | HDFC | Punjab National Bank | Union Bank of India | Bank of India)
Bookmark and Share Feedback Print
 
ಹಣದುಬ್ಬರ ಏರಿಕೆ ನಿಯಂತ್ರಣಕ್ಕಾಗಿ ಆರ್‌ಬಿಐ ಕಡಿಮೆ ಅವಧಿಯ ಸಾಲದ ಮೇಲಿನ ರೆಪೋ ದರಗಳಲ್ಲಿ ಹೆಚ್ಚಳ ಘೋಷಿಸಿದ್ದರಿಂದ, ವಾಹನ ,ಗೃಹ ಮತ್ತು ವಾಣಿಜ್ಯಿಕ ಸಾಲಗಳ ಬಡ್ಡಿ ದರಗಳಲ್ಲಿ ಏರಿಕೆಯಾಗುವ ಸಾಧ್ಯತೆಗಳಿವೆ.

ಆದಾಗ್ಯೂ ಕೇಂದ್ರ ವಿತ್ತಖಾತೆ ಸಚಿವ ಪ್ರಣಬ್ ಮುಖರ್ಜಿ ಮಾತನಾಡಿ, ಹಣದುಬ್ಬರ ಏರಿಕೆ ಕಡಿವಾಣಕ್ಕಾಗಿ ಆರ್‌ಬಿಐ ತೆಗೆದುಕೊಂಡ ಕ್ರಮಗಳಿಂದಾಗಿ ಅಭಿವೃದ್ಧಿಗೆ ತೊಂದರೆಯಾಗುವುದಿಲ್ಲ. ಬ್ಯಾಂಕ್‌ಗಳು ಮತ್ತು ಕೈಗಾರಿಕೋದ್ಯಮಿಗಳು ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಮೊದಲ ತ್ರೈಮಾಸಿಕ ಪರಿಷ್ಕರಣ ಸಭೆಯಲ್ಲಿ ಆರ್‌ಬಿಐ, ಕಡಿಮೆ ಅವಧಿಯ ಸಾಲದ ಮೇಲಿನ ರೆಪೋ ದರಗಳಲ್ಲಿ 25 ಬೇಸಿಸ್ ಪಾಯಿಂಟ್‌‌ಗಳು ಹಾಗೂ ರಿವರ್ಸ್ ರೆಪೋ ದರಗಳಲ್ಲಿ 50 ಬೇಸಿಸ್ ಪಾಯಿಂಟ್‌ಗಳಷ್ಟು ಏರಿಕೆ ಮಾಡಿ, ತಕ್ಷಣದಿಂದ ಜಾರಿಗೆ ಬರುವಂತೆ ಆದೇಶಿಸಿದೆ.

ಏತನ್ಮಧ್ಯೆ, ಕ್ಯಾಶ್ ರಿಸರ್ವ್ ರೇಶಿಯೋ ದರದಲ್ಲಿ ಯಾವುದೇ ಬದಲಾವಣೆ ಘೋಷಿಸಿಲ್ಲ. 3ಜಿ ತರಂಗಾಂತರಗಳನ್ನು ಖರೀದಿಸಿದ ಟೆಲಿಕಾಂ ಕಂಪೆನಿಗಳಿಗೆ ಒಂದು ಲಕ್ಷ ಕೋಟಿ ರೂಪಾಯಿ ಪಾವತಿಸುವ ಅವಶ್ಯಕತೆಯಿರುವುದರಿಂದ ಮಾರುಕಟ್ಟೆಗಳಲ್ಲಿ ನಗದು ಹರಿವಿನ ಕೊರತೆ ಎದುರಿಸಬೇಕಾಗುತ್ತದೆ ಎಂದು ಬ್ಯಾಂಕಿಂಗ್ ಕ್ಷೇತ್ರದ ಮೂಲಗಳು ಆತಂಕ ವ್ಯಕ್ತಪಡಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ