ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಇಂಧನ ಉತ್ಪನ್ನಗಳಲ್ಲಿ ಕನಿಷ್ಠ ದರ ಏರಿಕೆ: ಮುರಳಿ ದೇವ್ರಾ (SP | RJD | PDS | Fuel prices | Domestic LPG | Cooking gas)
Bookmark and Share Feedback Print
 
ಇಂಧನ ದರಗಳ ಏರಿಕೆ ಹಾಗೂ ಸರಕಾರದಿಂದ ದರ ನಿಯಂತ್ರಣವನ್ನು ಮುಕ್ತಗೊಳಿಸಿರುವುದನ್ನು ಸಮರ್ಥಿಸಿಕೊಂಡ ಇಂಧನ ಖಾತೆ ಸಚಿವ ಮುರಳಿ ದೇವ್ರಾ, ತೈಲ ಮಾರುಕಟ್ಟೆ ಕಂಪೆನಿಗಎಳ ಆರ್ಥಿಕ ಸ್ಥಿತಿ ಸುಧಾರಣೆಗೆ ಕನಿಷ್ಠ ದರ ಏರಿಕೆ ಅನಿವಾರ್ಯ ಎಂದು ಹೇಳಿದ್ದಾರೆ.

ಸೀಮೆಎಣ್ಣೆ ಮತ್ತು ಅಡುಗೆ ಅನಿಲ ಸಿಲೆಂಡರ್‌ ದರಗಳಲ್ಲಿ ಕನಿಷ್ಠ ಏರಿಕೆ ಘೋಷಿಸಲಾಗಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಮುರಳಿ ದೇವ್ರಾ,ದರ ಏರಿಕೆ ವಿರೋಧಿಸಿ ಲೋಕಸಭೆಯಲ್ಲಿ ಕೋಲಾಹಲದ ನಂತರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಿದ್ದರು.

ಒಂದು ವೇಳೆ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ತೈಲ ದರ ತೊಳಲಾಟ ಗರಿಷ್ಠ ಮಟ್ಟಕ್ಕೆ ತಲುಪಿದಲ್ಲಿ ಸರಕಾರ ಮಧ್ಯೆಪ್ರವೇಶಿಸಲಿದೆ.ಜನತೆ ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

ದರ ಏರಿಕೆ ಕುರಿತಂತೆ ಚರ್ಚಿಸಲು ತಕ್ಷಣ ಅವಕಾಶ ನೀಡುವಂತೆ, ಸಮಾಜವಾದಿ ಪಕ್ಷ,ರಾಷ್ಟ್ರೀಯ ಜನತಾ ದಳದ ಮುಖಂಡರಾದ ಮುಲಾಯಂ ಮತ್ತು ಲಾಲುಪ್ರಸಾದ್ ಯಾದವ್ ಸೇರಿದಂತೆ ಇತರ ಸದಸ್ಯರು ಸರಕಾರಿ ವಿರೋಧಿ ಘೋಷಣೆಗಳನ್ನು ಕೂಗಿ, ಸರಕಾರದ ವೈಖರಿಯನ್ನು ತರಾಟೆಗೆ ತೆಗೆದುಕೊಂಡರು.
ಸಂಬಂಧಿತ ಮಾಹಿತಿ ಹುಡುಕಿ