ಹಣದುಬ್ಬರ ಏರಿಕೆ ನಿಯಂತ್ರಣಕ್ಕಾಗಿ ಭಾರತೀಯ ರಿಸರ್ವ್ ಬ್ಯಾಂಕ್, ಆರ್ಥಿಕ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ರೆಪೋ ದರಗಳಲ್ಲಿ ಹೆಚ್ಚಳಗೊಳಿಸಿದೆ ಎಂದು ಕೇಂದ್ರ ವಿತ್ತಖಾತೆ ಸಚಿವ ಪ್ರಣಬ್ ಮುಖರ್ಜಿ ಹೇಳಿದ್ದಾರೆ.
ಭಾರತೀಯ ರಿಸರ್ವ್ ಬ್ಯಾಂಕ್, ಹಣದುಬ್ಬರ ದರ ಕಳೆದ ಐದು ತಿಂಗಳುಗಳಿಂದ ಎರಡಂಕಿಗೆ ತಲುಪಿದ್ದರಿಂದ, ಹಣದುಬ್ಬರ ದರ ನಿಯಂತ್ರಣಕ್ಕಾಗಿ ರೆಪೋ ದರಗಳಲ್ಲಿ ಏರಿಕೆ ಘೋಷಿಸಿದೆ.
ಆರ್‌ಬಿಐ, ರೆಪೋ ದರಗಳಲ್ಲಿ 25ಬೇಸಿಸ್ ಪಾಯಿಂಟ್‌ಗಳು ಹಾಗೂ ರಿವರ್ಸ್ ರೆಪೋ ದರಗಳಲ್ಲಿ 50 ಬೇಸಿಸ್ ಪಾಯಿಂಟ್‌ಗಳನ್ನು ಹೆಚ್ಚಿಸಿದೆ. ಆದರೆ ಕ್ಯಾಶ್ ರಿಸರ್ವ್ ರೇಶಿಯೋ ದರದಲ್ಲಿ ಯಾವುದೇ ಬದಲಾವಣೆ ಘೋಷಿಸಲು ನಿರಾಕರಿಸಿದೆ.
ದೇಶದ ಖ್ಯಾತ ಆರ್ಥಿಕ ತಜ್ಞರು ಹಾಗೂ ಹೂಡಿಕೆದಾರರು ರೆಪೋ ಮತ್ತು ರಿವರ್ಸ್ ರೆಪೋ ದರಗಳಲ್ಲಿ 25 ಬೇಸಿಸ್ ಪಾಯಿಂಟ್‌ಗಳಷ್ಟು ಆರ್‌ಬಿಐ ಏರಿಕೆ ಮಾಡಲಿವೆ ಎಂದು ನಿರೀಕ್ಷೀಸಿದ್ದರು.