ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ರಿಲಯನ್ಸ್ ಇಂಡಸ್ಟ್ರೀಸ್‌ಗೆ 48.51 ಬಿಲಿಯನ್ ರೂ. ಲಾಭ (Reliance Industries | Energy group | Gas output | Petrochemicals | Profit)
Bookmark and Share Feedback Print
 
ನೈಸರ್ಗಿಕ ಅನಿಲ ಬೇಡಿಕೆ ಹೆಚ್ಚಳದಿಂದಾಗಿ, ರಿಲಯನ್ಸ್ ಇಂಡಸ್ಟ್ರೀಸ್ ಮೊದಲ ತ್ರೈಮಾಸಿಕ ಅವಧಿಯಲ್ಲಿ ನಿರೀಕ್ಷೆಗೂ ಮೀರಿ ಶೇ.32ರಷ್ಟು ನಿವ್ವಳ ಲಾಭ ದಾಖಲಿಸಿದೆ.

ಪೆಟ್ರೋಕೆಮಿಕಲ್ಸ್ ನೈಸರ್ಗಿಕ ಅನಿಲ ಉತ್ಪಾದಿಸುವ ದೇಶದ ಬೃಹತ್ ಕಂಪೆನಿಯಾದ ರಿಲಯನ್ಸ್, ಏಪ್ರಿಲ್-ಜೂನ್ ತಿಂಗಳ ವಹಿವಾಟಿನಲ್ಲಿ 48.51 ಬಿಲಿಯನ್ ರೂಪಾಯಿಗಳಷ್ಟು ನಿವ್ವಳ ಲಾಭಗಳಿಸಿದೆ. ಕಳೆದ ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ 36.66 ಬಿಲಿಯನ್ ರೂಪಾಯಿಗಳಷ್ಟು ನಿವ್ವಳ ಲಾಭಗಳಿಸಿತ್ತು.

ಬಿಲಿಯನೇರ್ ಮುಕೇಶ್ ಅಂಬಾನಿ ಸಂಚಾಲಿತ ರಿಲಯನ್ಸ್, ನೈಸರ್ಗಿಕ ಅನಿಲ ಬೇಡಿಕೆಯಲ್ಲಿ ಹೆಚ್ಚಳವಾಗಿದ್ದರಿಂದ, ಕಳೆದ ವರ್ಷದ ಅವದಿಗೆ ಹೋಲಿಸಿದಲ್ಲಿ ಪ್ರಸಕ್ತ ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ ನಿವ್ವಳ ಲಾಭದಲ್ಲಿ ಏರಿಕೆಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಶೇರುಪೇಟೆಯಲ್ಲಿ ಒಟ್ಟು ರಿಲಯನ್ಸ್ ಶೇರುಗಳ ಮೌಲ್ಯ 74 ಬಿಲಿಯನ್ ಡಾಲರ್‌ಗಳಿಗೆ ತಲುಪಿದ್ದು, 2010ರ ಅವಧಿಯಲ್ಲಿ ಶೇ.3.4ರಷ್ಟು ಕುಸಿತವಾಗಿವೆ. ಮುಂಬೈ ಮಾರುಕಟ್ಟೆಯಲ್ಲಿ ಶೇರುಗಳು ಶೇ.3.5ರಷ್ಟು ಏರಿಕೆ ಕಂಡಿವೆ.
ಸಂಬಂಧಿತ ಮಾಹಿತಿ ಹುಡುಕಿ