ಅರ್ಸೆಲ್ಲರ್ ಮಿತ್ತಲ್ ನಿವ್ವಳ ಲಾಭದಲ್ಲಿ ಶೇ.23ರಷ್ಟು ಕುಸಿತ
ಬ್ರೂಸೆಲ್ಸ್, ಬುಧವಾರ, 28 ಜುಲೈ 2010( 12:40 IST )
ವಿಶ್ವದ ಉಕ್ಕು ತಯಾರಿಕೆ ಬೃಹತ್ ಸಂಸ್ಥೆಯಾದ ಅರ್ಸೆಲ್ಲರ್ ಮಿತ್ತಲ್, ಕಚ್ಚಾ ವಸ್ತುಗಳ ದರ ಏರಿಕೆ ಹಾಗೂ ಚೀನಾದಿಂದ ಬೇಡಿಕೆಯಲ್ಲಿ ಕುಸಿತವಾಗಿದ್ದರಿಂದ ಮೂರನೇ ತ್ರೈಮಾಸಿಕ ಅವಧಿಯ ಮುಕ್ತಾಯಕ್ಕೆ ನಿವ್ವಳ ಲಾಭದಲ್ಲಿ ಅಲ್ಪ ಕುಸಿತ ಕಂಡಿದೆ.
ಅರ್ಸೆಲ್ಲರ್ ಮಿತ್ತಲ್ ಕಂಪೆನಿ, ಮೂರನೇ ತ್ರೈಮಾಸಿಕ ಅವದಿಯ ಮುಕ್ತಾಯಕ್ಕೆ 2.1ಬಿಲಿಯನ್ ಡಾಲರ್‌ಗಳಿಂದ 2.5ಬಿಲಿಯನ್ ಡಾಲರ್‌ಗಳ ನಷ್ಟ ಅನುಭವಿಸಿದೆ.ನಿವ್ವಳ ಲಾಭದಲ್ಲಿ ಶೇ.23ರಷ್ಟು ಕುಸಿತ ಕಂಡಿದೆ.
ಪ್ರಸಕ್ತ ವರ್ಷದ ಎರಡನೇ ತ್ರೈಮಾಸಿಕ ಅವದಿಯಲ್ಲಿ 3.0 ಬಿಲಿಯನ್ ಡಾಲರ್‌ಗಳಷ್ಟು ನಿವ್ವಳ ಲಾಭಗಳಿಸಿತ್ತು ಎಂದು ಕಂಪೆನಿ ಶೇರುಪೇಟೆಗೆ ಸಲ್ಲಿಸಿದ ಮಾಹಿತಿಯಲ್ಲಿ ಬಹಿರಂಗಪಡಿಸಿದೆ.
ಮಾರುಕಟ್ಟೆಯ ತಜ್ಞರ ಪ್ರಕಾರ, ಅರ್ಸೆಲ್ಲರ್ ಮಿತ್ತಲ್ ಕಂಪೆನಿ,ಮೂರನೇ ತ್ರೈಮಾಸಿಕ ಅವಧಿಯಲ್ಲಿ 2.6 ಬಿಲಿಯನ್ ಡಾಲರ್‌ಗಳಷ್ಟು ನಷ್ಟ ಅನುಭವಿಸಲಿದೆ ಎಂದು ಅಧ್ಯಯನ ವರದಿಯಲ್ಲಿ ಬಹಿರಂಗಪಡಿಸಿದ್ದರು.
ಜಾಗತಿಕ ಮಟ್ಟದಲ್ಲಿ ಕಚ್ಚಾ ವಸ್ತುಗಳ ದರ ಏರಿಕೆ ಹಾಗೂ ಬೇಡಿಕೆ ಕುಸಿತದಿಂದಾಗಿ, ನಿವ್ವಳ ಲಾಭದಲ್ಲಿ ಕುಸಿತವಾಗಿದೆ ಎಂದು ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಿ ಮಿತ್ತಲ್ ತಿಳಿಸಿದ್ದಾರೆ.