ಇಂಜಿನಿಯರಿಂಗ್ ಕ್ಷೇತ್ರದ ದೈತ್ಯ ಕಂಪೆನಿಯಾದ ಲಾರ್ಸೆನ್ ಆಂಡ್ ಟೌಬ್ರೋ, ಜೂನ್ 30ಕ್ಕೆ ಮೊದಲ ತ್ರೈಮಾಸಿಕ ಅಂತ್ಯಗೊಂಡಂತೆ ನಿವ್ವಳ ಲಾಭದಲ್ಲಿ 666 ಕೋಟಿ ರೂಪಾಯಿಗಳ ಲಾಭವಾಗಿದೆ. ಕಳೆದ ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ 1,598 ಕೋಟಿ ರೂಪಾಯಿಗಳಾಗಿತ್ತು ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಕಳೆದ ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ ತೆರಿಗೆಯನ್ನು ಪಾವತಿಸಿದ ನಂತರ.1,598 ಕೋಟಿ ರೂಪಾಯಿಗಳ ನಿವ್ವಳ ಲಾಭವಾಗಿತ್ತು.ಅಲ್ಟ್ರಾಟೆಕ್ ಸಿಮೆಂಟ್‌ನಲ್ಲಿ ದೀರ್ಘಾವಧಿ ಹೂಡಿಕೆಯಿಂದಾಗಿ 1,020 ಕೋಟಿ ರೂಪಾಯಿಗಳ ಲಾಭವಾಗಿತ್ತು ಎಂದು ಕಂಪೆನಿ ಮುಂಬೈ ಶೇರುಪೇಟೆಗೆ ಸಲ್ಲಿಸಿದ ಮಾಹಿತಿಯಲ್ಲಿ ಬಹಿರಂಗಪಡಿಸಿದೆ.
ತ್ರೈಮಾಸಿಕ ಅವಧಿಯಲ್ಲಿ, ಕಂಪೆನಿಗೆ 15,626 ಕೋಟಿ ರೂಪಾಯಿಗಳ ಗ್ರಾಹಕರ ಬೇಡಿಕೆಯಿದ್ದು, ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಶೇ.63ರಷ್ಟು ವಹಿವಾಟಿನಲ್ಲಿ ಚೇತರಿಕೆಯಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಏಪ್ರಿಲ್-ಜೂನ್ ತಿಂಗಳ ಅವಧಿಯಲ್ಲಿ ಉತ್ಪನ್ನಗಳ ನಿವ್ವಳ ಮಾರಾಟದಲ್ಲಿ ಶೇ.6.4ರಷ್ಟು ಏರಿಕೆಯಾಗಿದ್ದು, 7,835 ಕೋಟಿ ರೂಪಾಯಿಗಳಿಗೆ ತಲುಪಿದೆ.
ಮುಂಬೈ, ಶೇರುಪೇಟೆಯಲ್ಲಿ ಕಂಪೆನಿಯ ಶೇರುದರ ಪ್ರತಿ ಶೇರಿಗೆ 1,888 ರೂಪಾಯಿಗಳಾಗಿದ್ದು, ಶೇ.1.64ರಷ್ಟು ಕುಸಿತ ಕಂಡಿವೆ.