ಸಂಸತ್ ಅಧಿವೇಶನದಲ್ಲಿ ದರ ಏರಿಕೆ ಕುರಿತಂತೆ ಚರ್ಚಿಸುವುದನ್ನು ಸ್ವಾಗತಿಸಿದ ವಿತ್ತಸಚಿವ ಪ್ರಣಬ್ ಮುಖರ್ಜಿ, ದರ ಏರಿಕೆಯ ಬಗ್ಗೆ ಚರ್ಚಿಸಬಹುದು. ಆದರೆ ಮತ ಪರಿಗಣನೆಯಿಲ್ಲ ಎಂದು ಹೇಳಿದ್ದಾರೆ.
ಸಂವಿಧಾನದನ್ವಯ ದರ ಏರಿಕೆಯ ಹೊಣೆಗಾರಿಕೆಯನ್ನು ನಿಭಾಯಿಸುವಲ್ಲಿ ಕೇಂದ್ರ ಸರಕಾರ ವಿಫಲವಾಗಿಲ್ಲದಿರುವಾಗ, ಅಂತಹ ವಿಷಯಗಳನ್ನು ಮತ ಏಣಿಕೆಯ ವಿಧಿಯನ್ನು ಅನುಸರಿಸುವಂತಿಲ್ಲ ಎಂದು ಮುಖರ್ಜಿ ಸ್ಪಷ್ಟಪಡಿಸಿದ್ದಾರೆ.
ಚರ್ಚೆಯಲ್ಲಿ ಮಧ್ಯಪ್ರವೇಶಿಸಿ ಮಾತನಾಡಿದ ಮುಖರ್ಜಿ, ಸಂಸತ್ತಿನಲ್ಲಿ ಕೆಲ ನಿಯಮಗಳಲ್ಲಿ ಮೀಸಲಾತಿಗಳಿರುವುದರಿಂದ, ಮತ ಏಣಿಕೆಗೆ ಅವಕಾಶವಿಲ್ಲ ಎಂದು ಹೇಳಿದರು.
ದರಗಳನ್ನು ಏರಿಕೆ ಘೋಷಿಸಿ ಸರಕಾರ ವಿಕೃತ ಸಂತೋಷವನ್ನು ಅನುಭವಿಸುತ್ತಿಲ್ಲ.ಕೆಲವೊಂದು ಕಾರಣಗಳಿಂದಾಗಿ ದರ ಏರಿಕೆ ಮುಂದುವರಿದಿವೆ.ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆಯಾಗಿರುವುದು ಸರಕಾರದ ವೈಫಲ್ಯವಲ್ಲ ಎಂದು ವಿವರಣೆ ನೀಡಿದರು.
ದರ ಏರಿಕೆ ಕುರಿತಂತೆ ಚರ್ಚೆ ನಡೆಸುವುದನ್ನು ಸ್ವಾಗತಿಸುತ್ತೇವೆ.ದರ ಏರಿಕೆಗೆ ಕಾರಣವಾದ ಎಲ್ಲಾ ವಿಷಯಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವುದು ಸೂಕ್ತ. ಒಂದು ವೇಳೆ ವಿರೋಧ ಪಕ್ಷಗಳು ದರ ಏರಿಕೆ ನಿಯಂತ್ರಣಕ್ಕಾಗಿ ಸಲಹೆಗಳನ್ನು ನೀಡಿದಲ್ಲಿ ಸ್ವಾಗತ ಎಂದು ಅಹ್ವಾನ ನೀಡಿದರು.