ಚಿನ್ನದ ದರ ಸತತ ಮಬರನೇ ದಿನವೂ ಕುಸಿತಗೊಂಡಿದೆ. ಇಂದಿನ ವಹಿವಾಟಿನಲ್ಲಿ ಗರಿಷ್ಠ ಎರಡು ತಿಂಗಳ ಕುಸಿತಗೊಂಡಿರುವುದು , ಹಬ್ಬದ ಸೀಜನ್ ಹಿನ್ನೆಲೆಯಲ್ಲಿ ಚಿನ್ನದ ಸಂಗ್ರಹಕಾರರಿಗೆ ವರದಾನವಾಗಿ ಪರಿಣಮಿಸಿದೆ ಎಂದು ಡೀಲರ್‌ಗಳು ಹೇಳಿದ್ದಾರೆ.
ಚಿನ್ನದ ಖರೀದಿಯಲ್ಲಿ ಚೇತರಿಕೆಯಾಗಿದೆ. ಕೆಲ ದಿನಗಳ ಹಿಂದೆ 10ಕೆಜಿ ಚಿನ್ನ ಖರೀದಿಸಿದ ವಹಿವಾಟುದಾರರು,ಚಿನ್ನದ ದರ ಪ್ರತಿ10ಗ್ರಾಂಗೆ 17,900 ರೂಪಾಯಿಗಳಿಗೆ ಇಳಿಕೆ ಕಂಡಿದ್ದರಿಂದ, ಇದೀಗ 40 ಕೆಜಿ ಚಿನ್ನವನ್ನು ಖರೀದಿಸುತ್ತಾರೆ ಎಂದು ಕೋಲ್ಕತಾ ಮೂಲದ ಜೆಜೆ ಗೋಲ್ಡ್ ಹೌಸ್‌ನ ಮಾಲೀಕರಾದ ಹರ್ಷದ್ ಅಜ್ಮೆರಾ ಸಂತಸ ವ್ಯಕ್ತಪಡಿಸಿದ್ದಾರೆ.
ಚಿನಿವಾರಪೇಟೆಯಲ್ಲಿ ಇಂದು ಮಧ್ಯಾಹ್ನದ ವೇಳೆಗೆ ಚಿನ್ನದ ದರ ಪ್ರತಿ 10ಗ್ರಾಂಗೆ 17,743 ರೂಪಾಯಿಗಳಿಗೆ ತಲುಪಿತ್ತು. ಮೇ ತಿಂಗಳ ಅವಧಿಯಲ್ಲಿ 17,705 ರೂಪಾಯಿಗಳಿಗೆ ದರ ಇಳಿಕೆ ಕಂಡಿತ್ತು.
ಸಾಗರೋತ್ತರ ಮಾರುಕಟ್ಟೆಗಳಲ್ಲಿ ಚಿನ್ನದ ದರ ಪ್ರತಿ ಔನ್ಸ್‌ಗೆ 1,150 ಡಾಲರ್‌ಗಳಿಗೆ ಕುಸಿದಲ್ಲಿ, ಚಿನ್ನದ ಖರೀದಿಯಲ್ಲಿ ಮತ್ತಷ್ಟು ಏರಿಕೆಯಾಗಲಿದೆ ಎಂದು ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಡೀಲರ್‌ಗಳು ತಿಳಿಸಿದ್ದಾರೆ.
ರಕ್ಷಾ ಬಂಧನ ಹಬ್ಬ ಅಗಸ್ಟ್ 24 ರಂದು ಹಾಗೂ ನವೆಂಬರ್‌ನಲ್ಲಿ ಬಂದಿರುವ ದಾಂತೆರಸ್ ಚಿನ್ನ ಖರೀದಿಯ ಹಬ್ಬವಾಗಿದ್ದರಿಂದ, ಹಬ್ಬದ ಸೀಜನ್ ಹಿನ್ನೆಲೆಯಲ್ಲಿ, ಚಿನ್ನದ ಖರೀದಿಯಲ್ಲಿ ಏರಿಕೆಯಾಗಿದೆ.