ಬ್ಯಾಂಕ್ ಠೇವಣಿ ಬಡ್ಡಿ ದರದಲ್ಲಿ ಏರಿಕೆ ಸಾಧ್ಯತೆ:ಒ.ಪಿ.ಭಟ್
ನವದೆಹಲಿ, ಬುಧವಾರ, 28 ಜುಲೈ 2010( 18:47 IST )
ಮುಂಬರುವ ತಿಂಗಳಿನಿಂದ ಠೇವಣಿ ಬಡ್ಡಿ ದರಗಳಲ್ಲಿ ಹೆಚ್ಚಳವಾಗುವ ಸಾಧ್ಯತೆಗಳಿವೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮೂಲಗಳು ತಿಳಿಸಿವೆ.
ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ಮತ್ತು ರಿವರ್ಸ್ ರೆಪೋ ದರಗಳಲ್ಲಿ ಏರಿಕೆ ಘೋಷಿಸಿದೆ. ಬ್ಯಾಂಕ್‌ಗಳ ಠೇವಣಿ ಬಡ್ಡಿ ದರಗಳಲ್ಲಿ ಹೆಚ್ಚಳವಾಗುವ ಸಾಧ್ಯತೆಗಳಿರುವುದರಿಂದ, ಠೇವಣಿದಾರರಿಗೆ ಹೆಚ್ಚಿನ ಲಾಭವಾಗಲಿದೆ ಎಂದು ಬ್ಯಾಂಕ್‌ನ ಮುಖ್ಯಸ್ಥ ಒ.ಪಿ.ಭಟ್ ಅಭಿಪ್ರಾಯಪಟ್ಟಿದ್ದಾರೆ.
ಮುಂಬರುವ ಅಗಸ್ಟ್-ಸೆಪ್ಟೆಂಬರ್ ತಿಂಗಳುಗಳ ಅವಧಿಯಲ್ಲಿ ಶೇ.0.25ರಷ್ಟು ಠೇವಣಿ ಬಡ್ಡಿ ದರಗಳು ಏರಿಕೆಯಾಗಲಿವೆ ಎಂದು ಭಟ್ ತಿಳಿಸಿದ್ದಾರೆ.
ಮಂಗಳವಾರದಂದು,ರಿಸರ್ವ್ ಬ್ಯಾಂಕ್ ರೆಪೋ ದರದಲ್ಲಿ ಶೇ.0.25 ರಷ್ಟು ಹಾಗೂ ರಿವರ್ಸ್ ರೆಪೋ ದರದಲ್ಲಿ ಶೇ.0.50ರಷ್ಟು ಹೆಚ್ಚಳ ಘೋಷಿಸಿತ್ತು.
ಠೇವಣಿ ಬಡ್ಡಿ ದರಗಳ ಏರಿಕೆಯಿಂದಾಗಿ ಲಾಭಾಂಶದಲ್ಲಿ ಕೊರತೆಯಾಗಲಿದೆ ಎನ್ನುವ ಆತಂಕವನ್ನು ತಳ್ಳಿಹಾಕಿದ ಎಸ್‌ಬಿಐ ಮುಖ್ಯಸ್ಥ ಭಟ್,ಆರ್ಥಿಕತೆ ಚೇತರಿಕೆಯಾಗುತ್ತಿರುವುದರಿಂದ ಲಾಭಾಂಶ ಸ್ಥಿರತೆಗೆ ಕಾರಣವಾಗಲಿದೆ ಎಂದು ಹೇಳಿದ್ದಾರೆ.