ಮಾಹಿತಿ ತಂತ್ರಜ್ಞಾನ ರಫ್ತು ಕ್ಷೇತ್ರದಲ್ಲಿ ಎರಡನೇ ಸ್ಥಾನದಲ್ಲಿರುವ ಇನ್ಫೋಸಿಸ್ ಹಾಗೂ ಎಚ್ಎಎಲ್ಗೆ ಬ್ರಿಟನ್ ಪ್ರದಾನಿ ಡೇವಿಡ್ ಕ್ಯಮರೂನ್ ಭೇಟಿ ನೀಡಿದರು ಎಂದು ಕಂಪೆನಿ ಮೂಲಗಳು ತಿಳಿಸಿವೆ.
ಕ್ಯಾಮರೂನ್ ಮೂರನೇ ಬಾರಿ ಭಾರತಕ್ಕೆ ಭೇಟಿ ನೀಡಿದ್ದು, ಬ್ರಿಟನ್ ಪ್ರದಾನಿಯಾದ ನಂತರ ಮೊದಲ ಬಾರಿಗೆ ಭಾರತ ಪ್ರವಾಸವನ್ನು ಹಮ್ಮಿಕೊಂಡಿದ್ದಾರೆ.
ಭಾರತದೊಂದಿಗೆ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ವೃದ್ಧಿಗೊಳಿಸಲು ಬಯಸುವುದಾಗಿ ಬ್ರಿಟನ್ ಪ್ರದಾನಿ ಡೇವಿಡ್ ಕ್ಯಾಮರೂನ್ ಹೇಳಿದ್ದಾರೆ.
ಭಾರತದ ಪ್ರತಿಭಾವಂತ ನಟ ಶಾರುಕ್ ಖಾನ್ ಚಿತ್ರಗಳನ್ನು ನೋಡುವುದರಲ್ಲಿ ತುಂಬಾ ಸಂತೋಷವಾಗುತ್ತದೆ ಮತ್ತು ಖ್ಯಾತ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ವಿಶ್ವದ ಅಗ್ರಬ್ಯಾಟ್ಸ್ಮೆನ್ರಾಗಿದ್ದು, ಯಾವುದೇ ದೇಶದವರು ಗೌರವಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಕ್ಯಾಮರೂನ್ ಸಂತಸ ವ್ಯಕ್ತಪಡಿಸಿದ್ದಾರೆ.
ಆರ್ಥಿಕತೆ ಕುಸಿತ, ಭಯೋತ್ಪಾದನೆ ಮತ್ತು ಹವಾಮಾನ ವೈಪರೀತ್ಯ ಸವಾಲುಗಳಲ್ಲಿ ಭಾರತ ಮತ್ತು ಬ್ರಿಟನ್ ರಾಷ್ಟ್ರಗಳು ಒಂದಾಗಿ ಹೋರಾಟ ನಡೆಸುವ ಅಗತ್ಯವಿದೆ. ಭಯೋತ್ಪಾದನೆ ರಫ್ತನ್ನು ಬ್ರಿಟನ್ ಸಹಿಸುವುದಿಲ್ಲ ಎಂದು ಕ್ಯಾಮರೂನ್ ಪರೋಕ್ಷವಾಗಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದರು.
ಪ್ರಬಲವಾದ ಸ್ಥಿರ ರಾಜಕೀಯ, ಪ್ರಜಾಪ್ರಭುತ್ವವನ್ನು ಹೊಂದಿರುವ ಪಾಕಿಸ್ತಾನವನ್ನು ನೋಡಲು ನಾವು ಬಯಸುತ್ತೇವೆ.ಆದರೆ,ಯಾವುದೇ ಕಾರಣಕ್ಕೆ ಭಯೋತ್ಪಾದನೆ ರಫ್ತು ಸಹಿಸುವುದಿಲ್ಲ ಎಂದು ಬ್ರಿಟನ್ ಪ್ರದಾನಿ ಡೇವಿಡ್ ಕ್ಯಾಮರೂನ್ ತಮ್ಮ ನಿಲುವು ಸ್ಪಷ್ಟಪಡಿಸಿದರು.