ಎಚ್‌ಸಿಎಲ್ ಟೆಕ್ನಾಲಾಜೀಸ್‌ಗೆ 237.82 ಕೋಟಿ ರೂ.ನಿವ್ವಳ ಲಾಭ
ಮುಂಬೈ, ಗುರುವಾರ, 29 ಜುಲೈ 2010( 12:29 IST )
ದೇಶದ ಸಾಫ್ಟ್‌ವೇರ್ ರಫ್ತು ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಎಚ್‌ಸಿಎಲ್ ಟೆಕ್ನಾಲಾಜೀಸ್ ಲಿಮಿಟೆಡ್, ಜೂನ್ 30ಕ್ಕೆ ನಾಲ್ಕನೇ ತ್ರೈಮಾಸಿಕ ಅಂತ್ಯಗೊಂಡಂತೆ ನಿವ್ವಳ ಲಾಭದಲ್ಲಿ ಶೇ.23.26ರಷ್ಟು ಏರಿಕೆ ಕಂಡಿದ್ದು 237.82 ಕೋಟಿ ರೂಪಾಯಿಗಳಿಗೆ ತಲುಪಿದೆ.
ಕಳೆದ ವರ್ಷದ ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ 192.94 ಕೋಟಿ ರೂಪಾಯಿಗಳ ನಿವ್ವಳ ಲಾಭವಾಗಿತ್ತು ಎಂದು ಕಂಪೆನಿ ಮುಂಬೈ ಶೇರುಪೇಟೆಗೆ ಸಲ್ಲಿಸಿದ ವರದಿಯಲ್ಲಿ ಬಹಿರಂಗಪಡಿಸಿದೆ.
ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ ಕಂಪೆನಿಯ ಒಟ್ಟು ಆದಾಯ 1,330.61 ಕೋಟಿ ರೂಪಾಯಿಗಳಿಗೆ ತಲುಪಿದೆ.ಕಳೆದ ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ ನಿವ್ವಳ ಆದಾಯ 1,145.54 ಕೋಟಿ ರೂಪಾಯಿಗಳಾಗಿತ್ತು.
ಜೂನ್ 30ಕ್ಕೆ ವರ್ಷಾಂತ್ಯಗೊಂಡಂತೆ ಕಂಪೆನಿಯ ಕ್ರೂಢೀಕೃತ ನಿವ್ವಲಾಭದಲ್ಲಿ ಶೇ.4.58ರಷ್ಟು ಕುಸಿತವಾಗಿ,1,259.19 ಕೋಟಿ ರೂಪಾಯಿಗಳಿಗೆ ತಲುಪಿದೆ.
ಕಳೆದ ವರ್ಷದ ಜೂನ್ 30ಕ್ಕೆ ವರ್ಷಾಂತ್ಯಗೊಂಡಂತೆ ಕ್ರೂಢೀಕೃತ ನಿವ್ವಳ ಲಾಭ 1,319.63 ಕೋಟಿ ರೂಪಾಯಿಗಳಿಗೆ ತಲುಪಿತ್ತು.
ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ ಕಂಪೆನಿಯ ಒಟ್ಟು ಆದಾಯ 12,136.29 ಕೋಟಿ ರೂಪಾಯಿಗಳಿಗೆ ತಲುಪಿದೆ.ಕಳೆದ ವರ್ಷದ ಅವಧಿಯಲ್ಲಿ 10,229.41 ಕೋಟಿ ರೂಪಾಯಿಗಳಿಗೆ ತಲುಪಿತ್ತು ಎಂದು ಮುಂಬೈ ಶೇರುಪೇಟೆಗೆ ಸಲ್ಲಿಸಿದ ವರದಿಯಲ್ಲಿ ಮಾಹಿತಿಯನ್ನು ಪ್ರಕಟಿಸಿದೆ.
ಕಂಪೆನಿಯ ಅಡಳಿತ ಮಂಡಳಿ, 2 ರೂಪಾಯಿ ಮುಖಬೆಲೆಯ ಶೇರುಗಳನ್ನು ಹೊಂದಿದ ಶೇರುದಾರರಿಗೆ 1 ರೂಪಾಯಿ ಡೆವಿಡೆಂಡ್ ಘೋಷಿಸಿದೆ.
ಮುಂಬೈ ಶೇರುಪೇಟೆಯಲ್ಲಿ ಎಚ್‌ಸಿಎಲ್ ಶೇರುಗಳು, ಶೇ.6.2ರಷ್ಟು ಏರಿಕೆ ಕಂಡಿದ್ದು, ಪ್ರತಿ ಶೇರು 390 ರೂಪಾಯಿಗಳಿಗೆ ತಲುಪಿದೆ ಎಂದು ಶೇರುಪೇಟೆಯ ಮೂಲಗಳು ತಿಳಿಸಿವೆ.