ರಿಯಲ್ಟಿ ಉದ್ಯಮದಲ್ಲಿ ಮುಂಚೂಣಿಯಲ್ಲಿರುವ ಯುನಿಟೆಕ್ ಸಂಸ್ಥೆ, ಲಂಡನ್ ಮೂಲದ ಯುನಿಟೆಕ್ ಕಾರ್ಪೋರೇಟ್ ಪಾರ್ಕ್ಸ್ ಕಂಪೆನಿಯನ್ನು 700 ಕೋಟಿ ರೂಪಾಯಿಗಳಿಗೆ ಖರೀದಿಸಲು ಅಹ್ವಾನ ನೀಡಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಯುಸಿಪಿ ಕಂಪೆನಿಯನ್ನು 2006ರಲ್ಲಿ ಲಂಡನ್‌ನಲ್ಲಿ ಆರಂಭಿಸಲಾಗಿದ್ದು, ಲಂಡನ್ ಶೇರುಪೇಟೆಯಲ್ಲಿ ನೋಂದಾಯಿತ ಸಂಸ್ಥೆಯಾಗಿದೆ. ಒಟ್ಟು 360 ಪೌಂಡ್‌ಗಳವರೆಗೆ ವಾರ್ಷಿಕ ವಹಿವಾಟು ಹೊಂದಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಯುನಿಟೆಕ್ ಕಾರ್ಪೋರೇಟ್ ಪಾರ್ಕ್ಸ್ ಕಂಪೆನಿಯನ್ನು ಖರೀದಿಸಲು ಅಡಳಿತ ಮಂಡಳಿಯ ನಿರ್ದೇಶಕರೊಂದಿಗೆ ಮಾತುಕತೆಗಳು ನಡೆಯುತ್ತಿವೆ ಎಂದು ಯುನಿಟೆಕ್ ಗ್ರೂಪ್, ಮುಂಬೈ ಶೇರುಪೇಟೆಗೆ ಸಲ್ಲಿಸಿದ ಮಾಹಿತಿಯಲ್ಲಿ ಬಹಿರಂಗಪಡಿಸಿದೆ.
ಮುಂಬರುವ ಅಕ್ಟೋಬರ್‌ವರೆಗೆ ಮಾತುಕತೆಗಳು ಅಂತಿಮ ರೂಪವನ್ನು ಪಡೆಯುವ ಸಾಧ್ಯತೆಗಳಿವೆ ಎಂದು ಯುನಿಟೆಕ್ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ.