ಸರಕಾರಿ ಸ್ವಾಮ್ಯದ ಸಂಸ್ಥೆ ಸೇಲ್, ಜೂನ್ 30ಕ್ಕೆ ಮೊದಲನೆ ತ್ರೈಮಾಸಿಕ ಅಂತ್ಯಗೊಂಡಂತೆ, ನಿವ್ವಳ ಲಾಭದಲ್ಲಿ ಶೇ.11.55ರಷ್ಟು ಕುಸಿತವಾಗಿದ್ದು, 1,176.55 ಕೋಟಿ ರೂಪಾಯಿಗಳಿಗೆ ತಲುಪಿದೆ ಎಂದು ಮೂಲಗಳು ತಿಳಿಸಿವೆ.
ಮೊದಲ ತ್ರೈಮಾಸಿಕ ಅವಧಿಯಲ್ಲಿ ಉತ್ಪಾದನೆ ವೆಚ್ಚ ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಶೇ. 42 -45ರಷ್ಟು ಹೆಚ್ಚಳವಾಗಿದೆ. ಮಾರಾಟದಲ್ಲಿ ಕೂಡಾ 9.46 ಮಿಲಿಯನ್ ಟನ್‌ಗಳಷ್ಟು ಕುಸಿತವಾಗಿದೆ ಎಂದು ಸೇಲ್ ಮುಖ್ಯಸ್ಥ ಸಿ.ಎಸ್.ವರ್ಮಾ ತಿಳಿಸಿದ್ದಾರೆ.
ದೇಶದ ಉಕ್ಕು ತಯಾರಿಕೆ ಕಂಪೆನಿಗಳಲ್ಲಿ ಅಗ್ರಸ್ಥಾನದಲ್ಲಿರುವ ಸೇಲ್, ಕಳೆದ ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ 1,330.43 ಕೋಟಿ ರೂಪಾಯಿಗಳ ನಿವ್ವಳ ಲಾಭಗಳಿಸಿತ್ತು.
ಮೊದಲ ತ್ರೈಮಾಸಿಕ ಅವಧಿಯ ಒಟ್ಟು ಮಾರಾಟ 34,000 ಮಿಲಿಯನ್ ಟನ್‌ಗಳಿಗೆ ತಲುಪಿದೆ. ಕಳೆದ ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ 31,000 ಟನ್ ಉಕ್ಕು ಮಾರಾಟ ಮಾಡಲಾಗಿತ್ತು.
ಏತನ್ಮಧ್ಯೆ, ಮುಂಬರುವ ತಿಂಗಳುಗಳಲ್ಲಿ ಉಕ್ಕು ಬೇಡಿಕೆಯಲ್ಲಿ ಹೆಚ್ಚಳವಾಗುವ ಸಾಧ್ಯತೆಗಳಿವೆ ಎಂದು ವಿಶ್ವಾಸವ್ಯಕ್ತಪಡಿಸಿದ್ದಾರೆ.
ಇದೀಗ ಉಕ್ಕು ದರಗಳಲ್ಲಿ ಏರಿಕೆಯಾಗುತ್ತಿವೆ. ಉಕ್ಕು ದರಗಳಲ್ಲಿ ಏರಿಕೆ ಮುಂದುವರಿದಿದೆ. ವಾಹನೋದ್ಯಮ ಮತ್ತು ಕಟ್ಟಡ ನಿರ್ಮಾಣ ವಹಿವಾಟು ಚೇತರಿಕೆಯಾಗಲಿರುವುದರಿಂದ ಮುಂಬರುವ ಅಗಸ್ಟ್-ಸೆಪ್ಟೆಂಬರ್ ತಿಂಗಳ ಅವಧಿಯಲ್ಲಿ ಉಕ್ಕು ಬೇಡಿಕೆಯಲ್ಲಿ ಏರಿಕೆಯಾಗಲಿದೆ ಎಂದು ಸೇಲ್ ಮುಖ್ಯಸ್ಥ ಸಿ.ಎಸ್.ವರ್ಮಾ ಹೇಳಿದ್ದಾರೆ.