ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಬ್ಯಾಂಕ್‌ಗಳಿಂದ ಸ್ಥಿರ ಠೇವಣಿ ದರದಲ್ಲಿ ಶೇ.0.5ರಷ್ಟು ಹೆಚ್ಚಳ (Central Bank of India | Deposit rates | Up | Public sector lender)
Bookmark and Share Feedback Print
 
ಸಾರ್ವಜನಿಕ ಕ್ಷೇತ್ರದ ಸೆಂಟ್ರಲ್‌ ಬ್ಯಾಂಕ್ ಆಫ್ ಇಂಡಿಯಾ, ಸ್ಥಿರ ಠೇವಣಿಗಳ ಬಡ್ಡಿ ದರಗಳಲ್ಲಿ ಶೇ.0.5ರಷ್ಟು ಹೆಚ್ಚಳಗೊಳಿಸಿದ್ದು , ಅಗಸ್ಟ್ 1ರಿಂದ ಜಾರಿಗೆ ಬರಲಿದೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.

1-2 ವರ್ಷ ಅವಧಿಯ 15 ಲಕ್ಷ ಠೇವಣಿಗೆ ಪ್ರಸ್ತುತವಿರುವ ಶೇ.6.5ರಷ್ಟು ಬಡ್ಡಿ ದರದಿಂದ ಶೇ.6.75ಕ್ಕೆ ಏರಿಕೆ ಮಾಡಿದೆ.

46-90 ದಿನಗಳ ಅವಧಿಯ ಸ್ಠಿರ ಠೇವಣಿ ಬಡ್ಡಿ ದರವನ್ನು ಶೇ. 3.75ರಿಂದ ಶೇ.4.25ಬಡ್ಡಿ ದರಕ್ಕೆ ಏರಿಕೆ ಮಾಡಿದೆ.

46-90 ದಿನಗಳ ಅವಧಿಯ 15 ಲಕ್ಷ ರೂಪಾಯಿಗಳಿಂದ 1 ಕೋಟಿ ರೂಪಾಯಿ ಠೇವಣಿಗಳಿಗೆ, ಬಡ್ಡಿ ದರದಲ್ಲಿ ಶೇ. 4ರಿಂದ 4.25ಕ್ಕೆ ಏರಿಕೆ ಮಾಡಿದೆ.

1-2ವರ್ಷ ಅವಧಿಯ ಸ್ಥಿರ ಠೇವಣಿಗಳಿಗೆ ಶೇ.6.5ರಿಂದ ಶೇ.7ಕ್ಕೆ ಏರಿಕೆ ಮಾಡಿದೆ. 2-3 ವರ್ಷಗಳ ಅವಧಿಯ ಠೇವಣಿಗಳ ಬಡ್ಡಿ ದರದಲ್ಲಿ ಶೇ.6.75ರಿಂದ ಶೇ.7ಕ್ಕೆ ಏರಿಕೆ ಮಾಡಿ ಆದೇಶ ಹೊರಡಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ