ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಸಾಮ್‌ಸಂಗ್ ಎಲೆಕ್ಟ್ರಾನಿಕ್ಸ್‌ಗೆ 3.6 ಬಿಲಿಯನ್ ಡಾಲರ್ ಲಾಭ (Samsung Electronics | memory chips | Q2 profit | Televisions | Second-quarter)
ಸಾಮ್‌ಸಂಗ್ ಎಲೆಕ್ಟ್ರಾನಿಕ್ಸ್‌ಗೆ 3.6 ಬಿಲಿಯನ್ ಡಾಲರ್ ಲಾಭ
ಸಿಯೋಲ್, ಶುಕ್ರವಾರ, 30 ಜುಲೈ 2010( 12:17 IST )
ವಿಶ್ವದ ಮೆಮೋರಿ ಚಿಪ್ ತಯಾರಿಕೆಯಲ್ಲಿ ಅಗ್ರಸ್ಥಾನದಲ್ಲಿರುವ ಸಾಮ್‌ಸಂಗ್ ಎಲೆಕ್ಟ್ರಾನಿಕ್ಸ್,ಜಾಗತಿಕ ಮಟ್ಟದಲ್ಲಿ ಚಿಪ್ ಬೇಡಿಕೆಯಲ್ಲಿ ಹೆಚ್ಚಳವಾಗಿದ್ದರಿಂದ ಎರಡನೇ ತ್ರೈಮಾಸಿಕ ಅವಧಿಯ ಮುಕ್ತಾಯಕ್ಕೆ ದಾಖಲೆಯ ನಿವ್ವಳ ಲಾಭಗಳಿಸಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ದಕ್ಷಿಣ ಕೊರಿಯಾ ಮೂಲದ ಬೃಹತ್ ಸಂಸ್ಥೆ ಸಾಮ್‌ಸಂಗ್, ಏಪ್ರಿಲ್-ಜೂನ್ ತಿಂಗಳ ಅವಧಿಯಲ್ಲಿ 3.6 ಬಿಲಿಯನ್ ಡಾಲರ್‌ಗಳ ನಿವ್ವಳ ಲಾಭಗಳಿಸಿದೆ. ಕಳೆದ ವರ್ಷದ ಎರಡನೇ ತ್ರೈಮಾಸಿಕ ಅವಧಿಗೆ ಹೋಲಿಸಿದಲ್ಲಿ ಶೇ.83ರಷ್ಟು ಏರಿಕೆ ಕಂಡಿದೆ.
2009ರ ಎರಡನೇ ತ್ರೈಮಾಸಿಕ ಅವಧಿಯ ಕಂಪೆನಿಯ ಕಾರ್ಯಾಚರಣೆ ಲಾಭದಲ್ಲಿ, ಶೇ.88ರಷ್ಟು ಏರಿಕೆಯಾಗಿದೆ. ನಿವ್ವಳ ಆದಾಯದಲ್ಲಿ ಶೇ.17ರಷ್ಟು ಏರಿಕೆಯಾಗಿ 37.89 ಟ್ರಿಲಿಯನ್‌ಗಳಿಗೆ ತಲುಪಿದೆ.
ವಿಶ್ವದ ಮೊಬೈಲ್ ತಯಾರಿಕೆ ಕಂಪೆನಿಗಳಲ್ಲಿ, ಸಾಮ್‌ಸಂಗ್ ಎಲೆಕ್ಟ್ರಾನಿಕ್ಸ್ ಎರಡನೇ ಸ್ಥಾನವನ್ನು ಪಡೆದಿದೆ. ಸಾಮ್‌ಸಂಗ್ ಸಂಸ್ಥೆ ಮೊಬೈಲ್ ಉದ್ಯಮದಿಂದ 630 ಬಿಲಿಯನ್ ಡಾಲರ್ ನಿವ್ವಳ ಲಾಭಗಳಿಸಿದೆ. ನೋಕಿಯಾ ಸಂಸ್ಥೆ ಅಗ್ರಸ್ಥಾನದಲ್ಲಿದೆ.