ಜಪಾನ್‌ನ ದ್ವಿಚಕ್ರ ವಾಹನ ತಯಾರಿಕೆ ದೈತ್ಯ ಸಂಸ್ಥೆ ಹೊಂಡಾ, ಸೂಪರ್‌ಬೈಕ್ ವಿಎಫ್‌ಆರ್1200ಎಫ್ ಎನ್ನುವ ಮಾಡೆಲ್‌ನ ದ್ವಿಚಕ್ರ ವಾಹನವನ್ನು ಮಾರುಕಟ್ಟೆಗೆ ಬಿಡುಗಡೆಯಾಗಿದ್ದು, ದೆಹಲಿಯಲ್ಲಿ 17.5ಲಕ್ಷ ರೂಪಾಯಿಗಳ ದರವನ್ನು(ಶೋರೂಂ ಹೊರತುಪಡಿಸಿ) ನಿಗದಿಪಡಿಸಿದೆ ಎಂದು ಕಂಪೆನಿಯ ಉನ್ನತ ಮೂಲಗಳು ತಿಳಿಸಿವೆ.
ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿರುವ ಬೈಕ್‌ನ್ನು, ಜಪಾನ್‌ನ ಕುಮಾಮೊಟೊ ಘಟಕದಲ್ಲಿ ತಯಾರಿಸಲಾಗಿದ್ದು, ಗ್ರಾಹಕರಿಗೆ ವಿಶಿಷ್ಠವಾದ ಅನುಭವ ನೀಡುತ್ತದೆ ಎಂದು ಹೊಂಡಾ ಮೋಟಾರ್‌ಸೈಕಲ್ ಆಂಡ್ ಸ್ಕೂಟರ್ ಇಂಡಿಯಾ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಂಜಿ ಅಯೊಮಾ ಹೇಳಿದ್ದಾರೆ.
ವಿಎಫ್‌ಆರ್1200ಎಫ್ ನೂತನ ಬೈಕ್ 1237 ಸಿಸಿ ವಿ4 ಇಂಜಿನ್ ಹೊಂದಿದೆ ಎಂದು ಆಯೋಮಾ ತಿಳಿಸಿದ್ದಾರೆ.