ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಮೂಲಸೌಕರ್ಯ ಕ್ಷೇತ್ರದಲ್ಲಿ ಹೂಡಿಕೆಗೆ ಬ್ರಿಟನ್‌ಗೆ ಅಹ್ವಾನ (New delhi | low carbon emission technologies | Commerce and industry)
ದೇಶದ ಮೂಲಸೌಕರ್ಯ ಕ್ಷೇತ್ರದಲ್ಲಿ ಭಾರಿ ಬೇಡಿಕೆಯಿದೆ. ಮುಂಬರುವ ದಶಕದ ಅವಧಿಯಲ್ಲಿ 1.7 ಟ್ರಿಲಿಯನ್ ಡಾಲರ್ ಹೂಡಿಕೆ ಅಗತ್ಯವಾಗಿದ್ದು,ಬ್ರಿಟನ್‌ನ ಹೂಡಿಕೆದಾರರು ಮೂಲಸೌಕರ್ಯ ತಂತ್ರಜ್ಞಾನ ಕ್ಷೇತ್ರಗಳು ಹಾಗೂ ಆಹಾರ ಸಂಸ್ಕರಣ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವಂತೆ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಆನಂದ್ ಶರ್ಮಾ ಬ್ರಿಟನ್ ಉದ್ಯಮಿಗಳಿಗೆ ಅಹ್ವಾನ ನೀಡಿದ್ದಾರೆ.
ಬ್ರಿಟನ್ ಕಂಪೆನಿಗಳು ಜಾಗತಿಕ ಮಟ್ಟದ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಪರಿಣಿತಿಯನ್ನು ಹೊಂದಿದ್ದು, ದೇಶದ ಮೂಲಸೌಕರ್ಯ ಕ್ಷೇತ್ರದಲ್ಲಿ ಹೂಡಿಕೆ ಮಾಡಿದಲ್ಲಿ ಶ್ರೇಷ್ಠ ಪಾಲುದಾರಿಕೆಯನ್ನು ಹೊಂದಿದಂತಾಗುತ್ತದೆ ಎಂದು ಶರ್ಮಾ ತಿಳಿಸಿದ್ದಾರೆ.
ದೇಶದ ಆಹಾರ ಸಂಸ್ಕರಣ ಕ್ಷೇತ್ರದಲ್ಲಿ ಕೂಡಾ ಬ್ರಿಟನ್ ಉದ್ಯಮಿಗಳಿಗೆ ಹೂಡಿಕೆಗೆ ಅವಕಾಶವಿದೆ. ದೇಶದ ಆರ್ಥಿಕತೆ ವೇಗದಲ್ಲಿ ಅಭಿವೃದ್ಧಿ ಹೊಂದುತ್ತಿದ್ದು,ಮುಂಬರುವ ದಶಕದ ವೇಳೆಗೆ 500 ಮಿಲಿಯನ್ ಉದ್ಯೋಗಿಗಳು ಸೇರ್ಪಡೆಯಾಗಲಿದ್ದಾರೆ.ಙಾರತ ಮತ್ತು ಬ್ರಿಟನ್ ಸಹಪಾಲುದಾರಿಕೆಯಲ್ಲಿ ಪರಸ್ಪರ ತರಬೇತಿ ನೀಡುವ ಅವಶ್ಯಕತೆಯಿದೆ ಎಂದು ಶರ್ಮಾ ವಿವರಣೆ ನೀಡಿದ್ದಾರೆ.