ಉತ್ತಮ ಮುಂಗಾರು ಮಳೆಯಿಂದಾಗಿ, ದೇಶದಲ್ಲಿ ಭತ್ತದ ಉತ್ಪಾದನೆ ಪ್ರಸಕ್ತ ಆರ್ಥಿಕ ವರ್ಷದ ಅವಧಿಯಲ್ಲಿ 100 ಮಿಲಿಯನ್ ಟನ್‌ಗೆ ತಲುಪುವ ಸಾಧ್ಯತೆಗಳಿವೆ ಎಂದು ಕೃಷಿ ಸಚಿವಾಲಯದ ಉನ್ನತ ಅಧಿಕಾರಿಗಳು ಹೇಳಿದ್ದಾರೆ.
2009-10ರ ಅವಧಿಯಲ್ಲಿ ದೇಶದ ಭತ್ತ ಉತ್ಪಾದನೆ 89.13 ಮಿಲಿಯನ್‌ಗಳಾಗಿತ್ತು. ಹಿಂದಿನ ವರ್ಷದ ಅವಧಿಯಲ್ಲಿ ಬರಗಾಲದ ಮಧ್ಯೆಯು ಭತ್ತದ ಉತ್ಪಾದನೆ 99.18 ಮಿಲಿಯನ್ ಟನ್‌ಗಳಾಗಿತ್ತು ಎಂದು ತಿಳಿಸಿದ್ದಾರೆ.
ಅಗಸ್ಟ್ ಮತ್ತು ಸೆಪ್ಟಂಬರ್ ತಿಂಗಳ ಅವಧಿಯಲ್ಲಿ ಮುಂಗಾರು ಮಳೆ ಉತ್ತಮವಾಗಲಿರುವುದರಿಂದ, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಭತ್ತದ ಉತ್ಪಾದನೆ 100 ಮಿಲಿಯನ್ ಟನ್‌ಗಳಿಗೆ ತಲುಪಲಿದೆ ಎಂದು ಕೃಷಿ ಸಚಿವಾಲಯದ ಕಾರ್ಯದರ್ಶಿ ಪಿ.ಕೆ.ಬಸು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕಳೆದ ಎರಡು ವರ್ಷಕ್ಕೆ ಹೋಲಿಸಿದಲ್ಲಿ, ಪ್ರಸಕ್ತ ವರ್ಷದ ಅವಧಿಯಲ್ಲಿ ಭತ್ತ ಸೇರಿದಂತೆ ಎಲ್ಲಾ ಬೆಳೆಗಳು ಉತ್ತಮವಾಗಿರಲಿವೆ ಎಂದು ಕೃಷಿ ಸಚಿವಾಲಯದ ಕಾರ್ಯದರ್ಶಿ ಬಸು ಹೇಳಿದ್ದಾರೆ.