ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಡೀಸೆಲ್‌ದರವನ್ನು ನಿಯಂತ್ರಣದಿಂದ ಮುಕ್ತಗೊಳಿಸಲಿ:ಬಸು (Free diesel prices | Government | Adviser | Bal Krishna Chaturvedi)
Bookmark and Share Feedback Print
 
ಜಾಗತಿಕ ಕಚ್ಚಾ ತೈಲ ಮಾರುಕಟ್ಟೆಗಳಲ್ಲಿ ದರ ಸ್ಥಿರವಾಗಿರುವುದರಿಂದ ಡೀಸೆಲ್‌ ದರವನ್ನು ಸರಕಾರದಿಂದ ಮುಕ್ತಗೊಳಿಸಬೇಕು. ಒಂದು ವೇಳೆ ತೈಲ ದರ ಪ್ರತಿ ಬ್ಯಾರೆಲ್‌ಗೆ 80 ಡಾಲರ್‌ಗಳಿಗಿಂತ ಏರಿಕೆಯಾದಲ್ಲಿ ಉತ್ಪಾದಕರಿಗೆ ತೆರಿಗೆಯನ್ನು ಕಡಿತಗೊಳಿಸಬೇಕು ಎಂದು ಸರಕಾರದ ಹಿರಿಯ ಸಲಹೆಗಾರರು ಹೇಳಿದ್ದಾರೆ.

ಇಂಧನ ವಿಭಾಗದ ಉಸ್ತುವಾರಿಯನ್ನು ಹೊತ್ತಿರುವ ಯೋಜನಾ ಆಯೋಗದ ಸದಸ್ಯ ಬಾಲಕೃಷ್ಣ ಚತುರ್ವೇದಿ ಮಾತನಾಡಿ, ಜಾಗತಿಕ ಮಾರುಕಟ್ಟೆಯ ದರಗಳಿಗೆ ಅನ್ವಯವಾಗುವಂತೆ ದರಗಳನ್ನು ನಿಗದಿಪಡಿಸಲು ರೀಟೆಲ್‌ ವಹಿವಾಟುದಾರರಿಗೆ ಒಂದು ತಿಂಗಳೊಳಗಾಗಿ ಅನುಮತಿ ನೀಡಿದಲ್ಲಿ ಹಣದುಬ್ಬರ ಅಲ್ಪ ಕುಸಿತವಾಗುವ ಸಾಧ್ಯತೆಗಳಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮೂಲಸೌಕರ್ಯ ಕ್ಷೇತ್ರದ ಉಸ್ತುವಾರಿಯನ್ನು ಹೊತ್ತಿರುವ ಚತುರ್ವೇದಿ, ಭಾರತದ ಮೂಲಸೌಕರ್ಯ ಕ್ಷೇತ್ರದ ವೆಚ್ಚದಲ್ಲಿ 2012- 2017ರವರೆಗೆ ಶೇ.10ರಷ್ಟು ಹೆಚ್ಚಳವಾಗುವ ಅಗತ್ಯವಿದೆ ಎಂದು ಹೇಳಿದ್ದಾರೆ.

ಡೀಸೆಲ್ ದರವನ್ನು ಸರಕಾರದಿಂದ ಮುಕ್ತಗೊಳಿಸಿದಲ್ಲಿ, ರಿಲಯ್ನಸ್ ಇಂಡಸ್ಟ್ರೀಸ್ ನಂತಹ ಕಂಪೆನಿಗಳು ರೀಟೆಲ್ ಮಳಿಗೆಗಳನ್ನು ತೆರೆಯುವ ಮೂಲಕ ಸರಕಾರಿ ಸ್ವಾಮ್ಯದ ತೈಲ ಕಂಪೆನಿಗಳಾದ ಇಂಡಿಯನ್ ಆಯಿಲ್ ಸೇರಿದಂತೆ ಇತರ ಕಂಪೆನಿಗಳಿಗೆ ಸ್ಪರ್ಧೆಯನ್ನು ನೀಡಲಿವೆ ಎಂದು ಯೋಜನಾ ಆಯೋಗದ ಸದಸ್ಯ ಬಾಲಕೃಷ್ಣ ಚತುರ್ವೇದಿ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ