ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಭಾರತದ ಅತ್ಯಾಧುನಿಕ ಸೂಪರ್ ಕಂಪ್ಯೂಟರ್ ಅನಾವರಣ (Supercomputer | Annapurna | IMSc)
Bookmark and Share Feedback Print
 
ಭಾರತದ ಅತ್ಯಾಧುನಿಕ 'ಅನ್ನಪೂರ್ಣ' ಸೂಪರ್‌ಕಂಪ್ಯೂಟರ್‌ನ್ನು ಇನ್‌ಸ್ಟಿಟ್ಯೂಟ್‌ ಆಫ್ ಮ್ಯಾಥಮೆಟಿಕಲ್ ಸೈನ್ಸ್‌ ವಿಶ್ವವಿದ್ಯಾಲಯದಲ್ಲಿ ಅನಾವರಣಗೊಳಿಸಲಾಯಿತು.

ಅತ್ಯುನ್ನತ ತಂತ್ರಜ್ಞಾನದ 1.5 ಟೆರಾ ಬೈಟ್‌(ಟಿಬಿ) ಮೆಮೋರಿ ಮತ್ತು 30ಟಿಬಿ ಸ್ಟೋರೇಜ್ ಸ್ಥಳಾವಕಾಶವನ್ನು ಹೊಂದಿರುವ ಸೂಪರ್‌ ಕಂಪ್ಯೂಟರ್‌ನ್ನು ಅಣುಇಂಧನ ಆಯೋಗದ ಮುಖ್ಯಸ್ಥ ಶ್ರೀಕುಮಾರ್ ಬ್ಯಾನರ್ಜಿ ಬಿಡುಗಡೆಗೊಳಿಸಿದರು.

ಸೂಪರ್ ಕಂಪ್ಯೂಟರ್ ತಯಾರಿಕೆಯಲ್ಲಿ ತೊಡಗಿದ ತಾಂತ್ರಿಕ ತಂಡ, ಯಾವುದೇ ವಾಣಿಜ್ಯ ಉದ್ದೇಶವಿಟ್ಟುಕೊಂಡು ಕಾರ್ಯನಿರ್ವಹಿಸಿಲ್ಲ ಎಂದು ಬ್ಯಾನರ್ಜಿ ತಿಳಿಸಿದ್ದಾರೆ.

ಬೆಂಗಳೂರಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಮತ್ತು ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಾಮೆಂಟಲ್ ರಿಸರ್ಚ್ ಮುಂಬೈ ನಂತರ ಅನ್ನಪೂರ್ಣ ಸೂಪರ್ ಕಂಪ್ಯೂಟರ್ ತಯಾರಿಸಿದ ಇನ್‌ಸ್ಟಿಟ್ಯೂಟ್‌ ಆಫ್ ಮ್ಯಾಥಮೆಟಿಕಲ್ ಸೈನ್ಸ್‌ ಶ್ರೇಯಾಂಕದಲ್ಲಿ ಮೂರನೇ ಸ್ಥಾನಪಡೆದಿದೆ.
ಸಂಬಂಧಿತ ಮಾಹಿತಿ ಹುಡುಕಿ