ಸಾಗರೋತ್ತರ ಮಾರುಕಟ್ಟೆಗಳಲ್ಲಿ ಚಿನ್ನದ ಬೇಡಿಕೆಯಲ್ಲಿ ಹೆಚ್ಚಳವಾಗಿದ್ದರಿಂದ, ದೇಶಿಯ ಚಿನಿವಾರಪೇಟೆಯಲ್ಲಿ ಕೂಡಾ ಚಿನ್ನದ ದರ ಪ್ರತಿ 10ಗ್ರಾಂಗೆ 95 ರೂಪಾಯಿಗಳ ಏರಿಕೆಯಾಗಿ 18,145 ರೂಪಾಯಿಗಳಿಗೆ ತಲುಪಿದೆ.
ಕೈಗಾರಿಕೋದ್ಯಮ ಕ್ಷೇತ್ರದಿಂದ ಬೇಡಿಕೆ ಹೆಚ್ಚಳವಾಗಿದ್ದರಿಂದ, ಬೆಳ್ಳಿಯ ದರದಲ್ಲಿ ಕೂಡಾ ಪ್ರತಿ ಕೆಜಿಗೆ 450 ರೂಪಾಯಿಗಳಷ್ಟು ಏರಿಕೆಯಾಗಿ 28,900 ರೂಪಾಯಿಗಳಿಗೆ ತಲುಪಿದೆ.
ಸಾಗರೋತ್ತರ ಮಾರುಕಟ್ಟೆಗಳಲ್ಲಿ ಚಿನ್ನದ ದರ ಪ್ರತಿ ಔನ್ಸ್‌ಗೆ 14.90 ಡಾಲರ್‌ಗಳಷ್ಟು ಏರಿಕೆಯಾಗಿ 1,181.40 ರೂಪಾಯಿಗಳಿಗೆ ತಲುಪಿದೆ.
ಚಿನಿವಾರಪೇಟೆಯ ಹಿಂದಿನ ದಿನದ ವಹಿವಾಟಿನ ಮುಕ್ತಾಯಕ್ಕೆ ಚಿನ್ನದ ದರ ಪ್ರತಿ 10ಗ್ರಾಂಗೆ 35 ರೂಪಾಯಿಗಳಿಗೆ ಇಳಿಕೆ ಕಂಡಿತ್ತು.