ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರಗಳಲ್ಲಿ ಏರಿಕೆ ಘೋಷಿಸಿದ ಹಿನ್ನೆಲೆಯಲ್ಲಿ, ಯುನಿಯನ್ ಬ್ಯಾಂಕ್ ಕೂಡಾ ಬಡ್ಡಿ ದರದಲ್ಲಿ ಶೇ.0.5ರಷ್ಟು ಏರಿಕೆ ಮಾಡಿದ್ದು, ಸ್ಛಿರ ಠೇವಣಿ ಬಡ್ಡಿ ದರದಲ್ಲಿ ಶೇ.1ರಷ್ಟು ಹೆಚ್ಚಳಗೊಳಿಸಿದ್ದು, ಅಗಸ್ಟ್ 4 ರಿಂದ ಜಾರಿಗೆ ಬರಲಿದೆ.
ಯುನಿಯನ್ ಬ್ಯಾಂಕ್, ಸ್ಥಿರ ಠೇವಣಿ ಬಡ್ಡಿ ದರದಲ್ಲಿ ಶೇ.0.25ರಿಂದ ಶೇ.1ರವರೆಗೆ ತಲುಪಿದೆ. ಸಾಲದ ಬಡ್ಡಿದರ ಶೇ.12.25ಕ್ಕೆ ನಿಗದಿಪಡಿಸಲಾಗಿದೆ ಎಂದು ಬ್ಯಾಂಕ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಖಾಸಗಿ ಕ್ಷೇತ್ರದ ಮತ್ತೊಂದು ಬ್ಯಾಂಕ್ ಕೊಟಾಕ್ ಮಹೀಂದ್ರಾ ಕೂಡಾ ಸ್ಥಿರ ಬಡ್ಡಿ ದರದಲ್ಲಿ ಶೇ.0.25-ಶೇ.0.5ರಷ್ಟು ಹೆಚ್ಚಳಗೊಳಿಸಿದ್ದು, ಮುಂಬರುವ ತಿಂಗಳಿನಿಂದ ಜಾರಿಗೆ ಬರಲಿದೆ ಎಂದು ಮೂಲಗಳು ತಿಳಿಸಿದೆ.