ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » 2 ಟ್ರಿಲ್ಲಿಯನ್ ಡಾಲರುಗಳತ್ತ ಸಾಗುತ್ತಿದೆ ಭಾರತದ ಜಿಡಿಪಿ! (Indian economy | $2 trillion | PMEAC | GDP)
Bookmark and Share Feedback Print
 
2011-12ರ ಸಾಲಿನಲ್ಲಿ ಭಾರತದ ಅರ್ಥ ವ್ಯವಸ್ಥೆಯು 1.72 ಟ್ರಿಲ್ಲಿಯನ್ ಅಮೆರಿಕನ್ ಡಾಲರುಗಳನ್ನು ತಲುಪಲಿದ್ದು, 2 ಟ್ರಿಲ್ಲಿಯನ್ ಡಾಲರ್ ಮೊತ್ತದತ್ತ ಸಮೀಪಿಸುತ್ತಿದೆ ಎಂದು ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಸಮಿತಿ (ಪಿಎಂಇಎಸಿ) ಅಂದಾಜಿಸಿದೆ.

2009-10ನೇ ಸಾಲಿನಲ್ಲಿ ಮಾರುಕಟ್ಟೆಯಲ್ಲಿ ಭಾರತದ ಒಟ್ಟು ದೇಶೀಯ ಉತ್ಪಾದನೆ (ಜಿಡಿಪಿ) 1.31 ಟ್ರಿಲ್ಲಿಯನ್ ಡಾಲರ್. ಅಂದರೆ 60.8 ಲಕ್ಷ ಕೋಟಿ ರೂಪಾಯಿಗಳು. ಅದು ಈ ವರ್ಷ ಅಂದರೆ 2010-11ರ ಅವಧಿಯಲ್ಲಿ 1.52 ಟ್ರಿಲ್ಲಿಯನ್ ಡಾಲರ್ (70.5 ಲಕ್ಷ ಕೋಟಿ ರೂ.) ತಲುಪುವ ನಿರೀಕ್ಷೆಗಳಿವೆ ಎಂದು ಆರ್ಥಿಕ ಸಲಹಾ ಸಮಿತಿಯು ಇತ್ತೀಚಿನ ಆರ್ಥಿಕ ವಿಶ್ಲೇಷಣೆಯಲ್ಲಿ ಅಂದಾಜಿಸಿದೆ.

2011-12ರ ಆರ್ಥಿಕ ವರ್ಷದಲ್ಲಿ ಶೇ.9ರ ಜಿಡಿಪಿ ಪ್ರಗತಿ ನಿರೀಕ್ಷೆಯಲ್ಲಿರುವ ಭಾರತವು 1.72 ಟ್ರಿಲ್ಲಿಯನ್ ಡಾಲರ್ (79.8 ಲಕ್ಷ ಕೋಟಿ ರೂ.) ಮೊತ್ತವನ್ನು ಮುಟ್ಟಲಿದೆ. ಈ ಶೇ.9ರ ಪ್ರಗತಿಯನ್ನು ಭಾರತವು ಉಳಿಸಿಕೊಳ್ಳುವಲ್ಲಿ ಸಫಲವಾದರೆ 2013-14ರ ಹೊತ್ತಿಗೆ ದೇಶದ ಜಿಡಿಪಿ 2 ಟ್ರಿಲ್ಲಿಯನ್ ಡಾಲರ್ (92.7 ಲಕ್ಷ ಕೋಟಿ ರೂ.) ಆಗಲಿದೆ ಎಂದು ಈ ವರದಿ ತಿಳಿಸಿದೆ.

ಪ್ರಸಕ್ತ 14.3 ಟ್ರಿಲ್ಲಿಯನ್ ಡಾಲರ್ ಜಿಡಿಪಿ ಹೊಂದಿರುವ ಅಮೆರಿಕಾ ವಿಶ್ವದಲ್ಲೇ ಅಗ್ರ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಜಪಾನ್ 5.07 ಟ್ರಿಲ್ಲಿಯನ್ ಡಾಲರ್ ಜಿಡಿಪಿ ಸಾಧಿಸಿದೆ. ಮೂರನೇ ಸ್ಥಾನದಲ್ಲಿರುವ ಚೀನಾದ ಜಿಡಿಪಿ 5 ಟ್ರಿಲ್ಲಿಯನ್ ಡಾಲರ್.

ನಂತರದ ಸ್ಥಾನಗಳಲ್ಲಿ ಜರ್ಮನಿ, ಫ್ರಾನ್ಸ್, ಬ್ರಿಟನ್, ಇಟಲಿ, ಬ್ರೆಜಿಲ್, ಸ್ಪೇನ್, ಕೆನಡಾಗಳಿದ್ದು, 11ನೇ ಸ್ಥಾನದಲ್ಲಿ ಭಾರತವಿದೆ ಎಂದು 2009ರ ಆರ್ಥಿಕ ಪಟ್ಟಿಯಲ್ಲಿ ವಿಶ್ವಬ್ಯಾಂಕ್ ತಿಳಿಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ