ಗೋಧಿ ಉತ್ಪಾದನೆಯಲ್ಲಿ ವಿಶ್ವದಲ್ಲಿ ಎರಡನೇ ಸ್ಥಾನವನ್ನು ಪಡೆದಿರುವ ಭಾರತ, ಶೀಘ್ರದಲ್ಲಿ ಗೋಧಿ ಅಮುದಿನ ಮೇಲೆ ತೆರಿಗೆಯನ್ನು ವಿಧಿಸುವ ಯಾವುದೇ ಉದ್ದೇಶ ಹೊಂದಿಲ್ಲವೆಂದು ಕೇಂದ್ರ ಕೃಷಿ ಮತ್ತು ಆಹಾರ ಖಾತೆ ಸಚಿವ ಶರದ್ ಪವಾರ್ ಹೇಳಿದ್ದಾರೆ.
ಗೋಧಿ ಅಮುದಿನ ಮೇಲೆ ತೆರಿಗೆಯನ್ನು ವಿಧಿಸುವ ಪ್ರಸ್ತಾವನೆಯನ್ನು , ಸರಕಾರ ಪರಿಗಣನೆಗೆ ತೆಗೆದುಕೊಂಡಿಲ್ಲವೆಂದು ಕೇಂದ್ರ ಸಚಿವ ಪವಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಜೂನ್ ತಿಂಗಳ ಅವಧಿಯಲ್ಲಿ ಕೇಂದ್ರ ಆಹಾರ ಖಾತೆ ಸಚಿವಾಲಯ, ಕಳಪೆ ಗೋಧಿ ಅಮುದನ್ನು ತಡೆದು ಪರಿಶೀಲಿಸಲು ಗೋಧಿ ಅಮುದಿನ ಮೇಲೆ ಶೇ.40ರಷ್ಟು ತೆರಿಗೆಯನ್ನು ವಿಧಿಸಲು ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿತ್ತು.
ಆದರೆ, ಉನ್ನತ ಮಟ್ಟದ ಆಂತರಿಕ ಸಚಿವಾಲಯ ಸಮಿತಿ, ಗೋಧಿ ಅಮುದಿನ ಮೇಲೆ ತೆರಿಗೆ ಹೇರಿಕೆ ಪ್ರಸ್ತಾವನೆಯನ್ನು ತಳ್ಳಿ ಹಾಕಿತ್ತು.
ಭಾರತ, ಮಾರ್ಚ್ 31, 2010ಕ್ಕೆ ಆರ್ಥಿಕ ವರ್ಷಾಂತ್ಯಗೊಂಡಂತೆ 158,000 ಟನ್ ಗೋಧಿಯನ್ನು ಅಮುದು ಮಾಡಿಕೊಂಡಿತ್ತು. ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್ 1ರಿಂದ ಮೇ 31ರವರೆಗೆ 21,152ಟನ್ ಗೋಧಿಯನ್ನು ಅಮುದು ಮಾಡಿಕೊಂಡಿತ್ತು.