ದೇಶದ ವಾಹನ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸುಝುಕಿ ಹಾಗೂ ಹುಂಡೈ ಮೋಟಾರ್ ಕಂಪೆನಿ, ಜುಲೈ ತಿಂಗಳ ಅವಧಿಯ ವಾಹನಗಳ ಮಾರಾಟದ ಅವಧಿಯಲ್ಲಿ ಚೇತರಿಕೆಯಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಮಾರುತಿ ಸುಝುಕಿ ಇಂಡಿಯಾ, ದೇಶದ ವಾಹನ ಮಾರಾಟ ಕ್ಷೇತ್ರದಲ್ಲಿ ಅಗ್ರಸ್ಥಾನದಲ್ಲಿದ್ದು, ಎರಡನೇ ಬಾರಿಗೆ 100,000 ವಾಹನಗಳ ಮಾರಾಟದ ಗುರಿಯನ್ನು ತಲುಪಿದೆ. ವಾಹನಗಳ ಮಾರಾಟದಲ್ಲಿ ಶೇ.29ರಷ್ಟು ಏರಿಕೆಯಾಗಿದೆ.
ದೇಶದ ವಾಹನಗಳ ಮಾರಾಟದಲ್ಲಿ ಶೇ.33ರಷ್ಟು ಏರಿಕೆಯಾಗಿ 90,114 ವಾಹನಗಳನ್ನು ಮಾರಾಟ ಮಾಡಲಾಗಿದೆ. ಕಳೆದ ವರ್ಷಧ ಮೇ ತಿಂಗಳ ಅವಧಿಯಲ್ಲಿ 90,041 ವಾಹನಗಳನ್ನು ಮಾರಾಟ ಮಾಡಲಾಗಿತ್ತು.ರಫ್ತು ವಹಿವಾಟಿನಲ್ಲಿ ಶೇ.2ರಷ್ಟು ಏರಿಕೆಯಾಗಿ 10,743 ವಾಹನಗಳನ್ನು ಮಾರಾಟ ಮಾಡಲಾಗಿದೆ.
ಅಲ್ಟೊ, ವಾಗನ್ ಆರ್, ಎಸ್ಟಿಲೊಸ ರಿಟ್ಜ್, ಸ್ವಿಫ್ಟ್ ಮತ್ತು ಎ.ಸ್ಟಾರ್ ಮಾಡೆಲ್ ಕಾರುಗಳ ಮಾರಾಟದಲ್ಲಿ, ಶೇ.33ರಷ್ಟು ಗರಿಷ್ಠ ಏರಿಕೆಯಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.