ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರಗಳನ್ನು ಏರಿಕೆ ಘೋಷಿಸಿದ್ದರಿಂದ,ಕಾರ್ಪೋರೇಶನ್ ಬ್ಯಾಂಕ್ ಕೂಡಾ ಸಾಲದ ಮೇಲಿನ ಬಡ್ಡಿ ದರದಲ್ಲಿ 50ಬೇಸಿಸ್ ಪಾಯಿಂಟ್‌ಗಳನ್ನು ಹೆಚ್ಚಳಗೊಳಿಸಿ ಆದೇಶ ಹೊರಡಿಸಿದೆ.
ಪ್ರಸ್ತುತವಿರುವ ಬ್ಯಾಂಕ್‌ನ ಬಡ್ಡಿ ದರ ಶೇ.12ರಿಂದ ಶೇ.12.50ಕ್ಕೆ ಏರಿಕೆಯಾಗಿದ್ದು, ಅಗಸ್ಟ್ 2ರಿಂದ ಜಾರಿಯಾಗಿದೆ ಎಂದು ಕಾರ್ಪೋರೇಶನ್ ಬ್ಯಾಂಕ್ ಮುಂಬೈ ಶೇರುಪೇಟೆಗೆ ಸಲ್ಲಿಸಿದ ವರದಿಯಲ್ಲಿ ಬಹಿರಂಗಪಡಿಸಿದೆ.
ಕಳೆದ ವಾರ, ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್‌ಬಿ) ಮತ್ತು ಯುನಿಯನ್ ಬ್ಯಾಂಕ್ ಆಫ್ ಇಂಡಿಯಾ, ಈಗಾಗಲೇ ಬಡ್ಡಿ ದರಗಳಲ್ಲಿ ಏರಿಕೆಗೊಳಿಸಿ ಆದೇಶ ಹೊರಡಿಸಿವೆ.ಯುನಿಯನ್ ಬ್ಯಾಂಕ್ ಕೂಡಾ 50 ಬೇಸಿಸ್ ಪಾಯಿಂಟ್‌ಗಳಷ್ಟು ಬಡ್ಡಿ ದರದಲ್ಲಿ ಏರಿಕೆಗೊಳಿಸಿ ಆದೇಶ ಹೊರಡಿಸಿದೆ.
ರಿಸರ್ವ್ ಬ್ಯಾಂಕ್, ಹಣದುಬ್ಬರ ದರ ಏರಿಕೆಯನ್ನು ನಿಯಂತ್ರಿಸಲು, ಕಳೆದ ಜುಲೈ 27 ರಂದು ನಡೆಸಿದ ಆರ್ಥಿಕ ಪರಿಷ್ಕರಣೆ ಸಭೆಯಲ್ಲಿ ರೆಪೋ ದರಗಳಲ್ಲಿ ಶೇ.0.25ರಷ್ಟು ಹಾಗೂ ರಿವರ್ಸ್ ರೆಪೋ ದರಗಳಲ್ಲಿ ಶೇ.0.50ರಷ್ಟು ಹೆಚ್ಚಳಗೊಳಿಸಿ ಆದೇಶ ಹೊರಡಿಸಿತ್ತು.
ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್ ಸಾಲದ ಮೇಲಿನ ಬಡ್ಡಿ ದರಗಳಲ್ಲಿ ಏರಿಕೆಗೊಳಿಸಿ ಆದೇಶ ಹೊರಡಿಸಿವೆ.