ಖನಿಜವನ್ನು ಬಳಸುವ ಕೈಗಾರಿಕೋದ್ಯಮಗಳಿಂದ ಬೇಡಿಕೆಯಲ್ಲಿ ಹೆಚ್ಚಳವಾಗಿದ್ದರಿಂದ, ಖನಿಜ ಉತ್ಪಾದನೆ ಕಳೆದ ವರ್ಷದ ಮೇ ತಿಂಗಳಿಗೆ ಹೋಲಿಸಿದಲ್ಲಿ, ಪ್ರಸಕ್ತ ಮೇ ತಿಂಗಳ ಅವಧಿಯಲ್ಲಿ ಶೇ.8.69ರಷ್ಟು ಏರಿಕೆಯಾಗಿದೆ ಎಂದು ಗಣಿ ಸಚಿವಾಲಯದ ಮೂಲಗಳು ತಿಳಿಸಿವೆ.
ಮೇ 2010ರ ಅವಧಿಯಲ್ಲಿ ಖನಿಜ ಉತ್ಪಾದನೆ, ಕಳೆದ ವರ್ಷಕ್ಕೆ ಹೋಲಿಸಿದಲ್ಲಿ, ಪ್ರಸಕ್ತ ವರ್ಷದ ಅವಧಿಯಲ್ಲಿ ಶೇ.8.69ಕ್ಕೆ ಏರಿಕೆ ಕಂಡಿದೆ ಎಂದು ಗಣಿ ಸಚಿವಾಲಯ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಗಣಿಗಾರಿಕೆ ಉತ್ಪಾದನೆ ಮೇ ತಿಂಗಳ ಅವಧಿಯಲ್ಲಿ 10,746 ಕೋಟಿ ರೂಪಾಯಿಗಳಿಗೆ ತಲುಪಿದೆ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಕಲ್ಲಿದ್ದಲು ಗಣಿಗಾರಿಕೆ ಉತ್ಪಾದನೆ 3,716 ಕೋಟಿ ರೂಪಾಯಿಗಳಿಗೆ ತಲುಪಿದೆ.ಕಬ್ಬಿಣ ಅದಿರು ಉತ್ಪಾದನೆ 2,620 ಕೋಟಿ ರೂಪಾಯಿಗಳಿಗೆ ತಲುಪಿದ್ದು, ಎರಡನೇ ಸ್ಥಾನದಲ್ಲಿದೆ.ಪೆಟ್ರೋಲೀಯಂ (1,640 ಕೋಟಿ ರೂ.)ನೈಸರ್ಗಿ ಅನಿಲ (1,503 ಕೋಟಿ ರೂ.) ಗಳಿಗೆ ತಲುಪಿದೆ ಎಂದು ಗಣಿ ಸಚಿವಾಲಯ ಹೊರಡಿಸಿದ ವರದಿಯಲ್ಲಿ ಬಹಿರಂಗಪಡಿಸಿದೆ.