ಎಚ್‌ಸಿಎಲ್ ಇನ್ಫೋಸಿಸ್ಟಮ್ಸ್‌ಗೆ 1ಸಾವಿರ ಕೋಟಿ ರೂ.ಗುತ್ತಿಗೆ
ನವದೆಹಲಿ, ಸೋಮವಾರ, 2 ಆಗಸ್ಟ್ 2010( 17:47 IST )
ದೇಶದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿ ಸಾಲಿನಲ್ಲಿರುವ ಎಚ್‌ಸಿಎಲ್ ಇನ್ಫೋಸಿಸ್ಟಮ್ಸ್ ಸಾರ್ವಜನಿಕ ಸರಬರಾಜು ವ್ಯವಸ್ಥೆಯಲ್ಲಿರುವ ಪಡಿತರ ಚೀಟಿ ವಿತರಣೆಗಾಗಿ ಮಧ್ಯಪ್ರದೇಶದಿಂದ 1.000 ಕೋಟಿ ರೂಪಾಯಿಗಳ ಗುತ್ತಿಗೆಯನ್ನು ಪಡೆದಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಎಚ್‌ಸಿಎಲ್ ಇನ್ಫೋಸಿಸ್ಟಮ್ಸ್ ನೇತೃತ್ವದ ಸಹಯೋಗಿ ಸಂಸ್ಥೆ ಗುತ್ತಿಗೆಯನ್ನು ಪಡೆದಿದ್ದು, ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ ಮಾರ್ಗದರ್ಶನದಲ್ಲಿ ಮಧ್ಯಪ್ರದೇಶದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ವ್ಯವಸ್ಥೆ ಮಾದರಿ ಸಿದ್ಧಪಡಿಸುವುದು ಸೇರಿದೆ ಎಂದು ಕಂಪೆನಿಯ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.
ಸುಮಾರು ಆರು ವರ್ಷಗಳ ಅವಧಿಯಲ್ಲಿ (ಪ್ರತಿ ಕುಟುಂಬಕ್ಕೆ 10.98 ರೂ ದರದಲ್ಲಿ) ಪ್ರತಿ ತಿಂಗಳಿಗೆ 10 ಮಿಲಿಯನ್ ವಹಿವಾಟು ನಡೆಸುವ ಗುರಿಯನ್ನು ತಲುಪುವ ನಿರೀಕ್ಷೆಯಿದ್ದು, ಒಟ್ಟು ಗುತ್ತಿಗೆಯ ಮೌಲ್ಯ 856.44 ಕೋಟಿ ರೂಪಾಯಿಗಳಾಗಲಿವೆ ಎಂದು ಕಂಪೆನಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.